ಒಳ ಉಡುಪು ಯಾರಿಗೂ ಕಾಣಿಸುವುದಿಲ್ಲ. ಹಾಗಂತ ಒಳ ಉಡುಪಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಹೊರಗಿನ ದೇಹ ಸೌಂದರ್ಯ ಹೆಚ್ಚಾಗಬೇಕೆಂದ್ರೆ ಒಳ ಉಡುಪಿನ ಬಗ್ಗೆಯೂ ಗಮನ ನೀಡಬೇಕು.
ಬ್ರಾ ಖರೀದಿಸುವ ಮೊದಲು ಅದ್ರ ಅಳತೆ ಬಗ್ಗೆ ತಿಳಿದುಕೊಳ್ಳಿ. ಬ್ರಾ ಅಂಚುಗಳು ನೇತಾಡುತ್ತಿದ್ದರೆ ಅದು ಬ್ರಾ ಸರಿಯಾಗಿಲ್ಲ ಎಂದಲ್ಲ. ನಿಮ್ಮ ಗಾತ್ರಕ್ಕೆ ಅದು ತಕ್ಕದಾಗಿಲ್ಲ ಎಂದರ್ಥ. ಹಾಗಾಗಿ ನಿಮ್ಮ ಸ್ತನದ ಗಾತ್ರಕ್ಕೆ ತಕ್ಕಂತ ಬ್ರಾ ಖರೀದಿ ಮಾಡಿ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ಯಾಶನ್ ಬ್ರಾಗಳು ಲಭ್ಯವಿದ್ದು, ಅದರ ಖರೀದಿ ವೇಳೆಯೂ ನಿಮಗೆ ಇದು ಸೂಕ್ತವೇ ಎಂಬುದನ್ನು ನೋಡಬೇಕು.
ಹಿಂಭಾಗ ತೆರೆದಿರುವ ಅಥವಾ ಡೀಪ್ ಡ್ರೆಸ್ ಧರಿಸಿದಾಗ ಬ್ರಾ ಹೊರಗೆ ಕಾಣಿಸಿಕೊಂಡಲ್ಲಿ ನಾಚಿಕೆಯಾಗುತ್ತದೆ. ಇದಕ್ಕೆ ಹೊಂದುವ ಬ್ರಾ ಬೇಕಾಗುತ್ತದೆ. ಮಾಲ್ ಅಥವಾ ಅಂಗಡಿಗೆ ಹೋದಾಗ ಮಹಿಳೆಯರ ಒಳ ಉಡುಪು ಮತ್ತು ಬ್ರಾ ವಿಭಾಗಕ್ಕೆ ಹೋಗಿ ಸೂಕ್ತ ಬ್ರಾ ಖರೀದಿ ಮಾಡಿ.
ಕಪ್ಪು ಉಡುಪಿನೊಂದಿಗೆ ಎಂದಿಗೂ ಬಿಳಿ ಬ್ರಾ ಧರಿಸಬೇಡಿ. ಇದು ಸೂರ್ಯ ಮತ್ತು ಕ್ಯಾಮೆರಾ ಬೆಳಕಿನಲ್ಲಿ ಹೈಲೈಟ್ ಆಗುತ್ತದೆ. ತೆಳುವಾದ ಡ್ರೆಸ್ ಧರಿಸಿದ ವೇಳೆ ಪ್ಯಾಂಟಿ ಲೈನ್ ಸ್ಪಷ್ಟವಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ದಪ್ಪ ಲೈನ್ ಇಲ್ಲದ ಒಳ ಉಡುಪು ಖರೀದಿ ಮಾಡಿ. ಅವುಗಳನ್ನು ತುಂಬಾ ಮೃದುವಾದ ಬಟ್ಟೆಗಳಿಂದ ತಯಾರಿಸಲಾಗುತ್ತದೆ. ಅಂಚುಗಳಲ್ಲಿ ಯಾವುದೇ ಹೊಲಿಗೆ ಇಲ್ಲದಿದ್ದರೆ, ಪ್ಯಾಂಟಿ ಲೈನ್ ಸಮಸ್ಯೆ ಇರುವುದಿಲ್ಲ.
ನಿಮ್ಮ ಡ್ರೆಸ್ ಸೌಂದರ್ಯ ಹೆಚ್ಚಿಸಲು ಬ್ರಾ ಹಾಗೂ ಪ್ಯಾಂಟಿ ಬಹಳ ಮುಖ್ಯ, ಹಾಗಾಗಿ ಡ್ರೆಸ್ ಗೆ ತಕ್ಕ ಬ್ರಾ, ಪ್ಯಾಂಟಿ ಧರಿಸಿ.