ಜೈಪುರ: ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ತನ್ನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದು, ಆಕೆಯನ್ನು ಬಂಧಿಸಲಾಗಿದೆ.
ಬುಧವಾರ ರಾಜಸ್ತಾನದ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು 618 ಗ್ರಾಂ ಶುದ್ಧ ಚಿನ್ನವನ್ನು ಪತ್ತೆಹಚ್ಚಿದ ನಂತರ ಮಹಿಳೆಯನ್ನು ಬಂಧಿಸಿದ್ದಾರೆ. ಚಿನ್ನವು ಸುಮಾರು 30.64 ಲಕ್ಷ ರೂ. ಮೌಲ್ಯದ್ದಾಗಿದ್ದು, ಮಹಿಳೆಯು ಏರ್ ಅರೇಬಿಯಾ ವಿಮಾನ ಜಿ9 435 ನಲ್ಲಿ ಶಾರ್ಜಾದಿಂದ ಜೈಪುರಕ್ಕೆ ಬಂದಿಳಿದಿದ್ದಳು.
BIG NEWS: ಕರ್ನಾಟಕ ಬಂದ್ ಕೈಬಿಟ್ಟ ಕನ್ನಡ ಸಂಘಟನೆಗಳು; ಇಂದು ಬೃಹತ್ ಪ್ರತಿಭಟನೆ
ಅನುಮಾನದ ಆಧಾರದ ಮೇಲೆ ಮಹಿಳೆಯನ್ನು ತಡೆಹಿಡಿಯಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ. ಮಹಿಳೆಯ ಒಳ ಉಡುಪುಗಳಲ್ಲಿ ಎರಡು ಪಾರದರ್ಶಕ ಪಾಲಿಥಿನ್ ಪೌಚ್‌ಗಳಲ್ಲಿ ಪ್ಯಾಕ್ ಮಾಡಲಾದ ಮತ್ತು ಕಪ್ಪು ಕಾರ್ಬನ್ ಟೇಪ್‌ನಿಂದ ಸುತ್ತಿದ ಹಳದಿ ಬಣ್ಣದ ಹರಳಿನ ಪೇಸ್ಟ್ ಪತ್ತೆಯಾಗಿದೆ.
ಕಸ್ಟಮ್ಸ್ ಆಕ್ಟ್ 1962 ರ ನಿಬಂಧನೆಗಳ ಅಡಿಯಲ್ಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನದ ಪೇಸ್ಟ್‌ನಿಂದ, 99.50 ಶೇಕಡಾ ಶುದ್ಧತೆ ಮತ್ತು 618.40 ಗ್ರಾಂ ತೂಕದ ಚಿನ್ನವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿರುವುದು ಇದೇ ಮೊದಲಲ್ಲ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.