ಸ್ತ್ರೀ ಮನೆಯ ಲಕ್ಷ್ಮಿ. ಮದುವೆಗಿಂತ ಮೊದಲು ತಂದೆ ಮನೆ ಹಾಗೂ ಮದುವೆಯಾದ್ಮೇಲೆ ಗಂಡನ ಮನೆಯ ಗೌರವವನ್ನು ಕಾಪಾಡುವುದು ಮಹಿಳೆಯ ಕರ್ತವ್ಯ. ಸಮಾಜ ಹಾಗೂ ಕುಟುಂಬಕ್ಕೆ ಅವಮಾನವಾಗುವಂತಹ ಕೆಲಸವನ್ನು ಸ್ತ್ರೀಯಾದವಳು ಮಾಡಬಾರದು. ಮನು ಸ್ಮೃತಿ ಪ್ರಕಾರ ಮಹಿಳೆ ಮಾಡುವ ಕೆಲವೊಂದು ಕೆಲಸಗಳು ಇಡೀ ಕುಟುಂಬದ ಗೌರವ ಹಾಳು ಮಾಡಿ ನಷ್ಟ ಅನುಭವಿಸಬೇಕಾಗುತ್ತದೆ.
ಗ್ರಂಥಗಳ ಪ್ರಕಾರ ಮಗುವಾಗಿದ್ದಾಗ ತಂದೆ, ಮದುವೆಯಾದ್ಮೇಲೆ ಗಂಡ ಹಾಗೂ ವಯಸ್ಸಾದ ಮೇಲೆ ಮಗ ಸ್ತ್ರೀಯ ರಕ್ಷಣೆ ಮಾಡ್ತಾರೆ. ಮದುವೆಯಾದ್ಮೇಲೆ ಪತ್ನಿಯಾದವಳು ಎಂದೂ ಪತಿಯ ಕೈ ಬಿಡಬಾರದು. ಪತಿಯಿಂದ ಬೇರೆಯಾಗಿ ತನಗಿಷ್ಟ ಬಂದ ಕೆಲಸ ಮಾಡಿದ್ರೆ ಅದ್ರ ಪರಿಣಾಮವನ್ನು ಮಕ್ಕಳು ಎದುರಿಸಬೇಕಾಗುತ್ತದೆ.
ಸ್ತ್ರೀಯಾದವಳು ಮದ್ಯಪಾನ ಮಾಡಬಾರದು. ಮದ್ಯ ಸೇವನೆ ಮಾಡಿದಾಗ ಒಳ್ಳೆಯದು-ಕೆಟ್ಟದರ ವ್ಯತ್ಯಾಸ ತಿಳಿಯುವುದಿಲ್ಲ. ಮದ್ಯಪಾನ ಮಾಡಿದ ಸ್ತ್ರೀ ಅನೇಕ ಬಾರಿ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡ್ತಾಳೆ. ಮದ್ಯಪಾನ ಮಾಡುವ ಮಹಿಳೆಯನ್ನು ಸಮಾಜ ಕೆಟ್ಟದಾಗಿ ನೋಡುತ್ತದೆ. ಮುಜುಗರದ ಪ್ರಸಂಗವನ್ನು ಕುಟುಂಬ ಎದುರಿಸಬೇಕಾಗುತ್ತದೆ. ಆರ್ಥಿಕ ನಷ್ಟವುಂಟಾಗುತ್ತದೆ. ಹಾಗಾಗಿ ಸ್ತ್ರೀಯೊಂದೆ ಅಲ್ಲ ಪುರುಷ ಕೂಡ ಮದ್ಯಪಾನದಿಂದ ದೂರವಿರಬೇಕು.
ಸ್ತ್ರೀಯಾದವಳು ದುಷ್ಟ ಪುರುಷರಿಂದ ದೂರವಿರಬೇಕು. ದುಷ್ಟ ಪುರುಷರು ಮಹಿಳೆಯನ್ನು ಕೆಳಮಟ್ಟದ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಇದ್ರಿಂದ ಸ್ತ್ರೀಗೆ ಕಳಂಕ ತರುತ್ತದೆ. ಸಮಾಜ ಅವರನ್ನು ನೋಡುವ ದೃಷ್ಠಿ ಬೇರೆಯಾಗುತ್ತದೆ.
ಬೆಳಿಗ್ಗೆ ಸೂರ್ಯೋದಯವಾದ ಮೇಲೆ ಮಲಗುವುದು ಒಳ್ಳೆಯದಲ್ಲ. ಸ್ತ್ರೀ ತುಂಬಾ ಸಮಯ ನಿದ್ರೆ ಮಾಡಿದಲ್ಲಿ ಮನೆಯ ವಾತಾವರಣ ಬದಲಾಗುತ್ತದೆ. ಕುಟುಂಬದ ಎಲ್ಲ ಜವಾಬ್ದಾರಿಯನ್ನು ಮಹಿಳೆಯಾದವಳು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ದರಿದ್ರ ಮನೆಯನ್ನು ಆವರಿಸುತ್ತದೆ. ಕುಟುಂಬದಲ್ಲಿ ಅಸಂತೋಷ ಮನೆ ಮಾಡುತ್ತದೆ.