alex Certify ಒಳ್ಳೆ ಪತ್ನಿಯಾಗಲು ಅನುಸರಿಸಿ ಈ ʼಟಿಪ್ಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ್ಳೆ ಪತ್ನಿಯಾಗಲು ಅನುಸರಿಸಿ ಈ ʼಟಿಪ್ಸ್ʼ

ಮಹಿಳೆಯಾದವಳು ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಅದ್ರಲ್ಲಿ ಮುಖ್ಯವಾದದ್ದು ಪತ್ನಿ ಪಾತ್ರ. ಅತ್ಯುತ್ತಮ ಪತ್ನಿಯಾಗಲು ಎಲ್ಲ ಮಹಿಳೆಯರು ಬಯಸ್ತಾರೆ. ಇದಕ್ಕಾಗಿ ಏನೆಲ್ಲ ಕಸರತ್ತು ಮಾಡ್ತಾರೆ. ಆದ್ರೆ ಕೆಲವರು ಯಶಸ್ಸು ಗಳಿಸಿದ್ರೆ ಮತ್ತೆ ಕೆಲವರು ಫೇಲ್ ಆಗ್ತಾರೆ. ಗುಡ್ ವೈಫ್ ಎನ್ನಿಸಿಕೊಳ್ಳುವ ಸರಳ ಉಪಾಯ ಇಲ್ಲಿದೆ.

ಪತ್ನಿಯಾದವಳು ಅತ್ತೆ – ಮಾವನನ್ನು ಗೌರವದಿಂದ ಕಾಣಬೇಕು. ತಂದೆ – ತಾಯಿಯನ್ನು ನೋಡಿಕೊಂಡಂತೆ ಅತ್ತೆ – ಮಾವಂದಿರನ್ನು ನೋಡಿಕೊಳ್ಳಬೇಕು. ಇದ್ರಿಂದ ಪತ್ನಿ ಮೇಲಿನ ಪ್ರೀತಿ, ಗೌರವ ಹೆಚ್ಚಾಗುತ್ತದೆ.

ಪ್ರತಿಯೊಬ್ಬ ಮನುಷ್ಯನಿಗೂ ಕೆಟ್ಟ ಹಾಗೂ ಒಳ್ಳೆ ಗುಣಗಳಿರುತ್ತವೆ. ನಿಮ್ಮ ಪತಿಯಲ್ಲೂ ಕೆಟ್ಟ ಗುಣಗಳಿದ್ದರೆ ಅದನ್ನು ನೇರವಾಗಿ ವಿರೋಧಿಸಬೇಡಿ. ಕೆಲವೊಂದು ವಿಷಯದಲ್ಲಿ ನೀವೇ ಹೊಂದಿಕೊಳ್ಳಿ. ಮತ್ತೆ ಕೆಲ ಹವ್ಯಾಸಗಳನ್ನು ನಿಧಾನವಾಗಿ ಬಿಡಿಸಲು ಪ್ರಯತ್ನ ಮಾಡಿ.

ಒಳ್ಳೆ ಪತ್ನಿಯಾಗಲು ನಿಮ್ಮ ಸ್ವಭಾವದಲ್ಲಿಯೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಿ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ, ಜಗಳ ಮಾಡುವುದನ್ನು ನಿಲ್ಲಿಸಿ.

ಗಂಡನ ಇಷ್ಟಗಳ ಬಗ್ಗೆ ತಿಳಿದುಕೊಳ್ಳಿ. ಕನಸುಗಳನ್ನು ಈಡೇರಿಸಿಕೊಳ್ಳಲು ಗಂಡನಿಗೆ ನೆರವಾಗಿ. ಅವಶ್ಯಕತೆಯಿಲ್ಲದ ಬೇಡಿಕೆಗಳನ್ನು ಗಂಡನ ಮುಂದಿಡಬೇಡಿ.

ಗಂಡನ ಒಳ್ಳೆ ಹವ್ಯಾಸ, ಮಾತುಗಳಿಗೆ ಹೆಚ್ಚಿನ ಗಮನ ನೀಡಿ. ಆಗ ನಿಮ್ಮ ಮನಸ್ಸು ಶಾಂತವಾಗಿದ್ದು, ಮನೆಯಲ್ಲಿ ಸುಖ – ಶಾಂತಿ ನೆಲೆಸಿರುತ್ತದೆ.

ಮನೆಯ ವಾತಾವರಣ ಎಂದೂ ಖುಷಿ ಖುಷಿಯಾಗಿರುವಂತೆ ನೋಡಿಕೊಳ್ಳಿ. ದುಡಿದು ಮನೆಗೆ ಬರುವ ಪತಿಗೆ ಮನೆ ನೆಮ್ಮದಿ ನೀಡಬೇಕೇ ಹೊರತು ಹೊರಗೆ ಹೋಗುವಂತಾಗಬಾರದು.

ಯಾವಾಗ್ಲೂ ಫಿಟ್ ಆಗಿರಿ. ಮನೆಗೆ ಗಂಡ ಬರುವ ವೇಳೆ ಸುಂದರವಾಗಿ ಅಲಂಕಾರ ಮಾಡಿಕೊಂಡು ನಗ್ತಾ ಪತಿಯನ್ನು ಸ್ವಾಗತಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...