
ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು ತಿಳಿಸಿದ್ದಾರೆ.
ಅಮೆರಿಕಾದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಸೆಕ್ಸ್, ಕೆಲಸಗಾರರು ತಮ್ಮ ಕೆಲಸದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಹಾಗೂ ಉತ್ತಮ ಕೆಲಸ ಮಾಡಲು ನೆರವಾಗುತ್ತದೆ ಎಂದವರು ತಿಳಿಸಿದ್ದಾರೆ. 159 ದಂಪತಿಯನ್ನು ಎರಡು ವಾರಗಳ ಕಾಲ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ರಾತ್ರಿ ಶಾರೀರಿಕ ಸಂಬಂಧ ಬೆಳೆಸಿದ್ದ ದಂಪತಿಯ ಮೂಡ್ ಬೆಳಿಗ್ಗೆ ಚೆನ್ನಾಗಿತ್ತು. ಖುಷಿ ಖುಷಿಯಾಗಿ ಕೆಲಸದಲ್ಲಿ ಪಾಲ್ಗೊಂಡಿದ್ದ ಅವರು, ಗಮನವಿಟ್ಟು, ಉತ್ಸಾಹದಿಂದ ಕೆಲಸ ಮಾಡಿದ್ದರು. ಸುಮಾರು 24 ಗಂಟೆಗಳ ಕಾಲ ಇದ್ರ ಪರಿಣಾಮ ಕಂಡಿದೆ. ಮಹಿಳೆ ಹಾಗೂ ಪುರುಷ ಇಬ್ಬರಲ್ಲಿಯೂ ಒಂದೇ ರೀತಿಯ ಪ್ರಭಾವ ಉಂಟಾಗಿತ್ತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಒಳ್ಳೆ ಸೆಕ್ಸ್ ಜೊತೆಗೆ ನಿದ್ರೆ ಕೂಡ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.