alex Certify ಒಳ್ಳೆಯ ಮೈಲೇಜ್‌, ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ: ಟಾಪ್‌ 5 ಡೀಸೆಲ್‌ ಕಾರುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ್ಳೆಯ ಮೈಲೇಜ್‌, ಬೆಲೆ 10 ಲಕ್ಷಕ್ಕಿಂತಲೂ ಕಡಿಮೆ: ಟಾಪ್‌ 5 ಡೀಸೆಲ್‌ ಕಾರುಗಳು

ಕಳೆದ ಕೆಲವು ವರ್ಷಗಳಿಂದ ಡೀಸೆಲ್ ಕಾರುಗಳ ಮಾರಾಟದಲ್ಲಿ ಕುಸಿತವಾಗಿದೆ. ಆದರೆ ವೆಚ್ಚ ಕಡಿತ ಮಾಡುವ ಉದ್ದೇಶದಿಂದ ಅನೇಕರು ಈಗಲೂ ಡೀಸೆಲ್ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಪೆಟ್ರೋಲ್ ಕಾರುಗಳಿಗಿಂತ ಡೀಸೆಲ್ ಕಾರುಗಳ ಬೆಲೆ ಅಧಿಕ, ಹಾಗಂತ ದೇಶದಲ್ಲಿ ಅಗ್ಗದ ಡೀಸೆಲ್ ಕಾರುಗಳು ಇಲ್ಲ ಎಂದಲ್ಲ. ಮಾರುಕಟ್ಟೆಯಲ್ಲಿ ಅನೇಕ ಅಗ್ಗದ ಡೀಸೆಲ್ ಕಾರುಗಳು ಲಭ್ಯವಿವೆ. 10 ಲಕ್ಷದೊಳಗಿನ ಟಾಪ್ 5 ಡೀಸೆಲ್ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.

10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಡೀಸೆಲ್ ಕಾರುಗಳು

ಟಾಟಾ ಆಲ್ಟ್ರೋಜ್ ಡೀಸೆಲ್ (ಬೆಲೆ 8.15 ರೂ.): ಇದು ಭಾರತದಲ್ಲಿನ ಅತ್ಯಂತ ಅಗ್ಗದ ಡೀಸೆಲ್ ಕಾರು. ಡೀಸೆಲ್ ಎಂಜಿನ್‌ನೊಂದಿಗೆ ಬರುವ ಏಕೈಕ ಹ್ಯಾಚ್‌ಬ್ಯಾಕ್ ಆಗಿದೆ. ಇದರಲ್ಲಿ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ (88bhp ಮತ್ತು 200Nm) ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಪೆಟ್ರೋಲ್ ಎಂಜಿನ್ ಆಯ್ಕೆಯೂ ಇದೆ.

ಮಹೀಂದ್ರ ಬೊಲೆರೊ ಮತ್ತು ಬೊಲೆರೊ ನಿಯೊ (ಬೆಲೆ 9.62 ಲಕ್ಷ ರೂ.): ಬೊಲೆರೊ ಮತ್ತು ಬೊಲೆರೊ ನಿಯೊ 7 ಆಸನಗಳ ಡೀಸೆಲ್ ಕಾರುಗಳು. ಎರಡೂ 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಹೊಂದಿವೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಬೊಲೆರೊ ಮಹೀಂದ್ರದ ಅತಿ ಹೆಚ್ಚು ಮಾರಾಟವಾಗುವ ಕಾರು ಎನಿಸಿಕೊಂಡಿದೆ.

ಮಹೀಂದ್ರಾ XUV300 ಡೀಸೆಲ್ (ಬೆಲೆ 9.90 ಲಕ್ಷ ರೂ.): ಇದು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ AMT ಲಭ್ಯವಿದೆ. ಇದು ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಹೊಂದಿದೆ.

ಕಿಯಾ ಸೋನೆಟ್ ಡೀಸೆಲ್ (9.95 ಲಕ್ಷ ರೂ.): ಇದು ಬಹು ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದೆ. ಅವುಗಳಲ್ಲಿ ಒಂದು 1.5-ಲೀಟರ್ ಡೀಸೆಲ್ ಎಂಜಿನ್. ಈ ಎಂಜಿನ್ 113bhp ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸೋನೆಟ್‌ನ ಡೀಸೆಲ್ ಎಂಜಿನ್ ಅನ್ನು iMT ಮತ್ತು 6-ಸ್ಪೀಡ್ AT ಆಯ್ಕೆಯೊಂದಿಗೆ ನೀಡಲಾಗುತ್ತದೆ.

ಟಾಟಾ ನೆಕ್ಸಾನ್ ಡೀಸೆಲ್ (ಬೆಲೆ 9.99 ಲಕ್ಷ ರೂ.): ಟಾಟಾ ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಲ್ಲಿ ಒಂದಾಗಿದೆ. ಇದು 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಕಾರು 6-ಸ್ಪೀಡ್ MT ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳನ್ನು ಪಡೆಯುತ್ತದೆ. ಇದು ಪೆಟ್ರೋಲ್ ಎಂಜಿನ್‌ನೊಂದಿಗೆ ಸಹ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...