
ವಿದ್ಯಾರ್ಥಿಗಳು ಕಾಲೇಜಿಗೆ ಸೇರಿಕೊಳ್ಳುವಾಗ ಹಲವು ಸಮಸ್ಯೆಗಳು ಎದುರಾಗುತ್ತದೆ. ಪೋಷಕರಿಗೆ ತಮ್ಮ ಮಕ್ಕಳಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟ್ ಸಿಗಬೇಕೆಂಬ ಆಸೆ ಇರುತ್ತದೆ. ಆದರೆ ಈ ವೇಳೆ ಸಮಸ್ಯೆಗಳು ಎದುರಾಗಿ ನೀವು ಇಷ್ಟಪಟ್ಟ ಕಾಲೇಜಿನಲ್ಲಿ ಸೀಟು ಪಡೆಯಲು ಅರ್ಹರಾಗಿದ್ದರೂ ಅಲ್ಲಿ ಸೀಟ್ ಕೈತಪ್ಪಿ ಹೋಗುತ್ತದೆ. ಇಂತಹ ಸಮಸ್ಯೆ ಎದುರಾಗಬಾರದಂತಿದ್ದರೆ ಕಾಲೇಜು ಸೇರುವ ಮುನ್ನ ಈ ಪರಿಹಾರ ಮಾಡಿ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಕ್ಕಳು ಸರಸ್ವತಿ ದೇವಿಯನ್ನು ಪೂಜಿಸಿ ಶನಿವಾರದಂದು ಸಾಸಿವೆ ದಾನ ಮಾಡುವುದು ಉತ್ತಮ. ಹಾಗೇ ಕುತ್ತಿಗೆಗೆ ಬೆಳ್ಳಿ ಪದಕ ಧರಿಸಬೇಕು. ಹಸಿರು ಬಟ್ಟೆಗಳನ್ನು ಬಡವರಿಗೆ ದಾನ ಮಾಡಬೇಕು. ಸೋಮವಾರದಿಂದ 43 ದಿನಗಳವರೆಗೆ ಇದನ್ನು ಮಾಡಬೇಕು.
ಮೂರು ಅಥವಾ ಏಳು ಮುಖಗಳನ್ನು ಹೊಂದಿರುವ ರುದ್ರಾಕ್ಷಾ ಹಾರವನ್ನು ಕುತ್ತಿಗೆಗೆ ಧರಿಸುವುದು ಒಳ್ಳೆಯದು. ತಾಯಿಯ ಕೈಯಿಂದ ಖರೀದಿಸಿದ ಬೆಳ್ಳಿಯ ಹಾರವನ್ನು ಧರಿಸಿದರೆ ನಿಮ್ಮ ಆಸೆ ಈಡೇರುತ್ತದೆ.