ಹಲವು ಮಂದಿ ಅಡುಗೆ ಮಾಡುವುದನ್ನು ಬಹಳ ಇಷ್ಟಪಡುತ್ತಾರೆ. ಯಾಕೆಂದ್ರೆ ಅಡುಗೆ ಅಂದ್ರೆ ಅದೊಂದು ಕಲೆಯಿದ್ದಂತೆ. ಆದರೆ, ಇನ್ನೂ ಕೆಲವರಿಗೆ ಅಡುಗೆ ಅಂದ್ರೆ ಅಲರ್ಜಿ….. ಚಹಾ ಕೂಡ ಮಾಡಲು ಬರೋಲ್ಲ ಅನ್ನೋರು ತುಂಬಾ ಜನ ಇದ್ದಾರೆ.
ಇನ್ನೂ ಕೆಲವರು ತಾವು ಮೊದಲ ಬಾರಿಗೆ ಮಾಡಿರುವಂತಹ ಖಾದ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಈ ಸಾಲಿಗೆ ಐಎಎಸ್ ಅಧಿಕಾರಿಯೊಬ್ಬರು ಸೇರಿದ್ದಾರೆ.
ಇತ್ತೀಚೆಗೆ, ಐಎಎಸ್ ಅಧಿಕಾರಿ ರಾಜ್ ಶೇಖರ್ ಅವರು ಅಡುಗೆ ಮಾಡಲು ಪ್ರಯತ್ನಿಸಿದ್ದಾರೆ. ತನ್ನ ಅಡುಗೆ ಮಾಡುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ ಅಧಿಕಾರಿಯು, ಅಡುಗೆಯಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸುತ್ತಿರುವ ಕಾರಣ ಶುಭ ಹಾರೈಸುವಂತೆ ನೆಟ್ಟಿಗರಲ್ಲಿ ಕೇಳಿಕೊಂಡಿದ್ದಾರೆ.
ಟ್ವೀಟ್‌ನಲ್ಲಿ ರಾಜ್ ಶೇಖರ್, ದಯವಿಟ್ಟು ತನಗೆ ಶುಭ ಹಾರೈಸಿ. ಅಡುಗೆಯಲ್ಲಿ ಅದೃಷ್ಟವನ್ನು ಪ್ರಯತ್ನಿಸುತ್ತಿದ್ದು, ಹೋಮ್ ಮಿನಿಸ್ಟರ್ (ಬಹುಶಃ ಪತ್ನಿ) ಮಾರ್ಗದರ್ಶನದಲ್ಲಿ ಉಪಹಾರಕ್ಕಾಗಿ ಅವಲಕ್ಕಿ ತಯಾರಿಸಲಾಗುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಚಿತ್ರದಲ್ಲಿ, ಕಾನ್ಪುರದ ಕಮೀಷನರ್ ರಾಜ್ ಶೇಖರ್ ಇಯರ್‌ಫೋನ್‌ಗಳನ್ನು ಧರಿಸಿದ್ದು, ಪೋಹಾ ಪಾತ್ರೆಯಲ್ಲಿ ಸ್ಪೂನ್ ಇಟ್ಟು ಫೋಟೋಗೆ ಪೋಸ್ ನೀಡಿದ್ದಾರೆ.
ಫೋಟೋ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಒಲೆ ಹಚ್ಚದೆ ಅವಲಕ್ಕಿ ಮಾಡಲು ಸಾಧ್ಯವಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಚಿತ್ರದಲ್ಲಿ ಒಲೆ ಉರಿಯುವುದು ಕಾಣುತ್ತಿಲ್ಲ ಅಂತಾ ಇನ್ನೂ ಕೆಲವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, ಬಹುಶಃ ಅವರು ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
https://twitter.com/rajiasup/status/1472415856143462401?ref_src=twsrc%5Etfw%7Ctwcamp%5Etweetembed%7Ctwterm%5E1472415856143462401%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fkanpur-commissioner-cooks-poha-in-viral-pic-internet-asks-why-is-gas-not-lit-4574033.html