alex Certify ಒಲೆ ಬೇಕೆಂದಿಲ್ಲ…..! ಕಾರಿನ ಬಾನೆಟ್‌ ಮೇಲೆ ಸಿದ್ಧವಾಯ್ತು ಚಪಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಲೆ ಬೇಕೆಂದಿಲ್ಲ…..! ಕಾರಿನ ಬಾನೆಟ್‌ ಮೇಲೆ ಸಿದ್ಧವಾಯ್ತು ಚಪಾತಿ

ಭಾರತವು ಬಿರು ಬಿಸಿಲಿನ ಧಗೆಗೆ ಬಸವಳಿಯುತ್ತಿದೆ. ದೇಶದ ಹಲವು ಭಾಗಗಳಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಈ ಮೂಲಕ ದಾಖಲೆ ಮುರಿಯುತ್ತಿದೆ. ಒಡಿಶಾ ಕೂಡ ಉರಿಯುತ್ತಿರುವ ಬಿಸಿಲಿನ ಧಗೆಗೆ ತತ್ತರಿಸುತ್ತಿದೆ. ಇದರಿಂದ ಒಲೆ ಇಲ್ಲದೆಯೂ ಅಡುಗೆ ಮಾಡಬಹುದು. ಅದು ಹೇಗೆ ಅಂತೀರಾ ಈ ಸ್ಟೋರಿ ಓದಿ……

ಒಡಿಶಾದ ಸೋನೆಪುರ್‌ನಲ್ಲಿ ಮಹಿಳೆಯೊಬ್ಬರು ಕಾರ್ ಬಾನೆಟ್‌ನಲ್ಲಿ ಚಪಾತಿ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ 40 ಡಿಗ್ರಿ ಶಾಖದಲ್ಲಿ ಕಾರಿನ ಬಾನೆಟ್‌ನಲ್ಲಿ ಚಪಾತಿ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.

ಟ್ವಿಟ್ಟರ್ ಬಳಕೆದಾರ ನಿಲಮಾಧಬ್ ಪಾಂಡಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಣಿಪುರದ ಹವಾಮಾನ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್, ಭಾರತಕ್ಕೆ ಅಭಿನಂದನೆಗಳು ! ಅಂತಿಮವಾಗಿ ನಾವು ಕಾರ್ ಬಾನೆಟ್ ಮೇಲೆ ರೊಟ್ಟಿ ಮಾಡಬಹುದು ಎಂದು ಟೀಕಿಸಿದ್ದಾರೆ.

ತುಂಬಾ ಬಿಸಿ ವಾತಾವರಣಕ್ಕೆ ಕಾರಣವೇನೆಂದರೆ ಮರಗಳನ್ನು ಕಡಿಯುತ್ತಿರುವುದು. ಆ ವಿಡಿಯೋದಲ್ಲಿ ಎಲ್ಲೂ ಮರಗಳೇ ಕಾಣಿಸುತ್ತಿಲ್ಲ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ನಾವು ಎಸಿ ರಸ್ತೆಗಳನ್ನು ಮಾಡಲು ಸಾಧ್ಯವಿಲ್ಲ, ಆದರೆ ಮರಗಳನ್ನು ನೆಡಬಹುದು ಅಂತೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

— NILAMADHAB PANDA ନୀଳମାଧବ ପଣ୍ଡା (@nilamadhabpanda) April 25, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...