ಕೊರೊನಾದ ಮಧ್ಯೆ ಟೋಕಿಯೊದಲ್ಲಿ ಒಲಂಪಿಕ್ಸ್ ನಡೆಯಲಿದೆ. ಜುಲೈ 25ರಿಂದ ಶುರುವಾಗುವ ಕ್ರೀಡಾಕೂಟಕ್ಕೆ ಸಾಕಷ್ಟು ತಯಾರಿ ನಡೆದಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಲು ಒಲಂಪಿಕ್ಸ್ ಸಂಘಟಕರು ಅನೇಕ ನಿರ್ಬಂಧಗಳನ್ನು ಹೇರಿದ್ದಾರೆ.
ಕೊರೊನಾ ಕಾರಣಕ್ಕೆ ಒಲಂಪಿಕ್ಸ್ ಗ್ರಾಮದಲ್ಲಿ ಸೆಕ್ಸ್ ಬ್ಯಾನ್ ಮಾಡಲಾಗಿದೆ. ಸಾಮಾಜಿಕ ಅಂತರಕ್ಕೆ ಮಹತ್ವ ನೀಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಕಾರ್ಡ್ ಬೋರ್ಡ್ ನ ಆ್ಯಂಟಿ ಸೆಕ್ಸ್ ಬೆಡ್ ಹಾಕಲಾಗಿದೆ. ಒಬ್ಬ ವ್ಯಕ್ತಿ ಮಾತ್ರ ಇದ್ರ ಮೇಲೆ ಮಲಗಬಹುದು. ಲೈಂಗಿಕ ಚಟುವಟಿಕೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ರೆ ಒಲಂಪಿಕ್ಸ್ ಗ್ರಾಮದಲ್ಲಿ ಸೆಕ್ಸ್ ನಿಯಂತ್ರಣ ಸಾಧ್ಯವಿಲ್ಲವೆಂದು ಮಾಜಿ ಆಟಗಾರರು ಹೇಳಿದ್ದಾರೆ.
ಜರ್ಮನಿಯ ಮಾಜಿ ಒಲಂಪಿಕ್ಸ್ ಆಟಗಾರ್ತಿ ಸುಸಾನ್ ಟೈಡ್ಕೆ, ಒಲಂಪಿಕ್ಸ್ ಗ್ರಾಮದಲ್ಲಿ ಲೈಂಗಿಕ ಚಟುವಟಿಕೆ ಇಲ್ಲದಿರಲು ಸಾಧ್ಯವಿಲ್ಲ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು,ಈ ವಿಷ್ಯ ನನಗೆ ನಗು ತರಿಸುತ್ತಿದೆ. ಒಲಂಪಿಕ್ಸ್ ನಲ್ಲಿ ಸೆಕ್ಸ್ ಒಂದು ಚರ್ಚೆಯ ವಿಷ್ಯವಾಗಿದೆ. ಆಟಗಾರರು, ಸ್ಪರ್ಧೆಗಿಂತ ಮೊದಲು ಸಾಕಷ್ಟು ತಯಾರಿ ನಡೆಸುತ್ತಾರೆ. ಸ್ಪರ್ಧೆ ನಂತ್ರ ಶಕ್ತಿಯನ್ನು ಹೊರಹಾಕಬೇಕಾಗುತ್ತದೆ. ರಿಲ್ಯಾಕ್ಸ್ ಆಗುವ ಅಗತ್ಯವಿರುತ್ತದೆ. ಒಲಂಪಿಕ್ಸ್ ಗ್ರಾಮದಲ್ಲಿ ಸಾಕಷ್ಟು ಪಾರ್ಟಿ ನಡೆಯುತ್ತದೆ. ಅದ್ರಲ್ಲಿ ಮದ್ಯದ ಪಾರ್ಟಿ ಕೂಡ ಇರುತ್ತದೆ ಎಂದಿದ್ದಾರೆ.
ಇವರು ಮಾತ್ರವಲ್ಲ ಟೇಬಲ್ ಟೆನಿಸ್ ಮಾಜಿ ಆಟಗಾರ ಮ್ಯಾಥ್ಯೂ ಸಯೀದ್ ಕೂಡ ಲೈಂಗಿಕ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. 1992ರಲ್ಲಿ ಬಾರ್ಸಿಲೋನಾ ಒಲಂಪಿಕ್ಸ್ ನಲ್ಲಿ ಸಾಕಷ್ಟು ಇಂಥ ಚಟುವಟಿಕೆ ನಡೆದಿತ್ತೆಂದು ಅವರು ಹೇಳಿದ್ದಾರೆ.