1- ಖರ್ಬೂಜ ಹಣ್ಣು, 1 ಕಪ್ -ಸಬ್ಬಕ್ಕಿ, 7 ಕಪ್ -ನೀರು, ¾ ಕಪ್ -ಸಕ್ಕರೆ, 1 ಕಪ್ – ತೆಂಗಿನಕಾಯಿ ಹಾಲು.
ಮಾಡುವ ವಿಧಾನ:
ಒಂದು ಪ್ಯಾನ್ ಗೆ ಸ್ವಲ್ಪ ನೀರು ಹಾಕಿ ಸಣ್ಣ ಉರಿಯಲ್ಲಿ ಸಕ್ಕರೆಯನ್ನು ಕರಗಿಸಿಕೊಳ್ಳಿ. ನಂತರ ಇದನ್ನು ಒಂದು ಕಡೆ ಇಟ್ಟುಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಿ.
ಅದಕ್ಕೆ ಸಬ್ಬಕ್ಕಿ ಹಾಕಿ 10 ನಿಮಿಷಗಳ ಕಾಲ ಬಿಡದೆ ಕೈಯಾಡಿಸಿ ನಂತರ ಗ್ಯಾಸ್ ಆಫ್ ಮಾಡಿ 5 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಇಡಿ. ನಂತರ ಬೇಯಿಸಿದ ಸಬ್ಬಕ್ಕಿಯನ್ನು ಶೋಧಿಸಿಕೊಳ್ಳಿ. ನಂತರ 3 ಕಪ್ ನೀರು ಹಾಕಿ ಮತ್ತೊಮ್ಮೆ ಶೋಧಿಸಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ.
ನಂತರ ಖರ್ಬೂಜ ಹಣ್ಣನ್ನು ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳ ರೀತಿ ಮಾಡಿಕೊಳ್ಳಿ. ಇದರಲ್ಲಿ 10 ಹೋಳುಗಳನ್ನು ತೆಗೆದಿಟ್ಟುಕೊಳ್ಳಿ. ಉಳಿದ ಹೋಳುಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ತಣ್ಣಗಾಗಿಸಿಕೊಂಡ ಸಕ್ಕರೆ ನೀರನ್ನು ಸೇರಿಸಿ ರುಬ್ಬಿಕೊಳ್ಳಿ.
ನಂತರ ಇದನ್ನು ಒಂದು ದೊಡ್ಡ ಬೌಲ್ ಗೆ ತೆಗೆದುಕೊಳ್ಳಿ. ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಬೇಯಿಸಿಟ್ಟುಕೊಂಡ ಸಬ್ಬಕ್ಕಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಉಳಿದ ಹಣ್ಣುಗಳ ತುಂಡನ್ನು ಹಾಕಿ ಫ್ರಿಡ್ಜ್ ನಲ್ಲಿಡಿ. ತಣ್ಣಗಿರುವಾಗ ಸರ್ವ್ ಮಾಡಿ.