
ಸುಮಾರು 2 ಎಕರೆವರೆಗೂ ಗುಡ್ಡದ ಮೇಲೆ ವಿಸ್ತಾರಗೊಂಡಿದ್ದು, ಅಂತ್ಯದಲ್ಲಿ ದೀಪ ಸ್ಥಂಭವಿದೆ, ಭಕ್ತ ಪ್ರವಾಸಿಗರು ಒಂದು ದಿನದ ಮಟ್ಟಿಗೆ ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಿಂದ ಸುಮಾರು 20 ಕಿ.ಮೀ. ಸಾಗಿದರೆ ಬಸವಾಪಟ್ಟಣದ ಮೂಲಕ ಪುಣ್ಯಸ್ಥಳ ತಲುಪಬಹುದು, ಊಟ, ತಿಂಡಿ ತಯಾರಿಸಿಕೊಂಡು ಒಂದು ದಿನ ಆರಾಮಾಗಿ ಸುತ್ತಾಡಿ ನೋಡಬಹುದಾದ ಸ್ಥಳ ಪುಣ್ಯಸ್ಥಳ.