alex Certify ಒಮ್ಮೆ ಚಾರ್ಜ್‌ ಮಾಡಿದ್ರೆ 320 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್‌ ಸ್ಕೂಟರ್‌….! ಇಲ್ಲಿದೆ ಬೆಲೆ ಸೇರಿದಂತೆ ಇತರೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮ್ಮೆ ಚಾರ್ಜ್‌ ಮಾಡಿದ್ರೆ 320 ಕಿಮೀ ಚಲಿಸುತ್ತೆ ಈ ಎಲೆಕ್ಟ್ರಿಕ್‌ ಸ್ಕೂಟರ್‌….! ಇಲ್ಲಿದೆ ಬೆಲೆ ಸೇರಿದಂತೆ ಇತರೆ ಡಿಟೇಲ್ಸ್

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಆದರೆ ಎಲೆಕ್ಟ್ರಿಕ್ ವಾಹನವನ್ನು ಖರೀದಿಸುವಾಗ ಗ್ರಾಹಕರು ಅದರ ವ್ಯಾಪ್ತಿಯ ಬಗ್ಗೆ ಭಯಪಡುತ್ತಾರೆ. ಗ್ರಾಹಕರ ಅಗತ್ಯವನ್ನು ಮನಗಂಡ ಕಂಪನಿಗಳು ಲಾಂಗ್ ರೇಂಜ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿವೆ. ‌

ಈಗ ಮಾರುಕಟ್ಟೆಯಲ್ಲಿ ಇಂತಹ ಅನೇಕ ಸ್ಕೂಟರ್‌ಗಳಿವೆ. ಒಮ್ಮೆ ಚಾರ್ಜ್‌ ಮಾಡಿದ್ರೆ 200-300ಕಿಮೀ  ವ್ಯಾಪ್ತಿಯನ್ನು ನೀಡುತ್ತವೆ. ಗರಿಷ್ಠ ಶ್ರೇಣಿಯನ್ನು ನೀಡುವ 3 ಸ್ಕೂಟರ್‌ಗಳ ಪಟ್ಟಿ ಇಲ್ಲಿದೆ. ಅಧಿಕ ವ್ಯಾಪ್ತಿಯ ಜೊತೆಗೆ ಈ ಸ್ಕೂಟರ್‌ಗಳ ವೈಶಿಷ್ಟ್ಯ ಕೂಡ ಅದ್ಭುತವಾಗಿದೆ.

Ola S1 Pro

ಓಲಾ ಕಂಪನಿಯ ಜನಪ್ರಿಯ ಮತ್ತು ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇದು ಒಂದಾಗಿದೆ. ಒಮ್ಮೆ ಸಂಪೂರ್ಣ ಚಾರ್ಜ್‌ ಮಾಡಿದ್ರೆ 181 ಕಿಮೀ ದೂರ ಇದು ಚಲಿಸಬಲ್ಲದು. ಈ ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 116 ಕಿಮೀ. ಸೊನ್ನೆಯಿಂದ 40 ಕಿಮೀಗೆ ವೇಗವನ್ನು ಹೆಚ್ಚಿಸಲು 2.9 ಸೆಕೆಂಡುಗಳನ್ನು ಇದು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್‌ ಸ್ಕೂಟರ್‌ನ ಬೆಲೆ 1,39,999 ರೂಪಾಯಿ. ಇದು ಒಟ್ಟು 14 ಬಣ್ಣಗಳಲ್ಲಿ ಲಭ್ಯವಿದೆ.

ಸಿಂಪಲ್‌ ವನ್‌

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ 236 ಕಿಮೀವರೆಗೆ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ. ಸೊನ್ನೆಯಿಂದ 40 ಕಿಮೀಗೆ ವೇಗವನ್ನು ಹೆಚ್ಚಿಸಲು ಇದು 2.77 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸಿಂಪಲ್ ಒನ್ ಸ್ಕೂಟರ್ ಬೆಲೆ 1,49,999 ರೂಪಾಯಿ. ಇದು ಎಲ್ಲಾ LED ಲೈಟಿಂಗ್, 30-ಲೀಟರ್ ಸಂಗ್ರಹಣೆ, ಬದಲಾಯಿಸಬಹುದಾದ ಬ್ಯಾಟರಿ, ವೇಗದ ಚಾರ್ಜಿಂಗ್ ಮತ್ತು 7-ಇಂಚಿನ TFT ಉಪಕರಣ ಕ್ಲಸ್ಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಗ್ರಾವ್ಟನ್ ಕ್ವಾಂಟಾ

ಇದು ಎಲೆಕ್ಟ್ರಿಕ್ ಬೈಕ್ ಮತ್ತು ಸ್ಕೂಟರ್‌ನ ಮಿಶ್ರಣ. ದೇಶದ ಮೊದಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾಗಿದ್ದು, ಕನ್ಯಾಕುಮಾರಿಯಿಂದ ಖರ್ದುಂಗ್ ಲಾವರೆಗೆ ಪ್ರಯಾಣಿಸಿದೆ. ಇದು 3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಪೂರ್ಣ ಚಾರ್ಜ್‌ನಲ್ಲಿ 150KM ಚಲಿಸುತ್ತದೆ. ಎರಡು ಬ್ಯಾಟರಿಗಳನ್ನು ಒಟ್ಟಿಗೆ ಇರಿಸುವ ಸೌಲಭ್ಯವನ್ನು ಹೊಂದಿದೆ ಮತ್ತು ಎರಡೂ ಬ್ಯಾಟರಿಗಳೊಂದಿಗೆ ನೀವು 320KM ವರೆಗೆ ಹೋಗಬಹುದು. ಕಂಪನಿಯ ವೆಬ್ ಸೈಟ್ ಪ್ರಕಾರ ಈ ಎಲೆಕ್ಟ್ರಿಕ್‌ ಸ್ಕೂಟರ್‌ನ ವೆಲೆ 1,15,000 ರೂಪಾಯಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...