
ಅಮೇಜ್ ಫಿಟ್ ಕೂಡ ಟಾಪ್ ಸ್ಮಾರ್ಟ್ ವಾಚ್ ಬ್ರಾಂಡ್ ಗಳಲ್ಲೊಂದು. ಅಮೇಜ್ ಫಿಟ್ ನ GTS 2 Miniಯ ಹೊಸ ವರ್ಷನ್ ಸದ್ಯದಲ್ಲೇ ಭಾರತದಲ್ಲಿ ಲಾಂಚ್ ಆಗ್ತಿದೆ. ಎಪ್ರಿಲ್ 11ರಂದು ಮಧ್ಯಾಹ್ನ 12 ಗಂಟೆಗೆ ಈ ವಾಚ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಇದರ ಬೆಲೆ 5999 ರೂಪಾಯಿ.
ಆದ್ರೆ ಎಪ್ರಿಲ್ 11ರಂದು ಇದೇ ವಾಚ್ 4999 ರೂಪಾಯಿಗೆ ಲಭ್ಯವಾಗಲಿದೆ. in.amazfit.com ಹಾಗೂ ಅಮೇಜಾನ್ ನಲ್ಲಿ ಗ್ರಾಹಕರು ಇದನ್ನು ಖರೀದಿ ಮಾಡಬಹುದು. Amazfit GTS 2 Mini New Version ನಲ್ಲಿ ಜಬರ್ದಸ್ತ್ ಫೀಚರ್ ಗಳಿವೆ. ಮಿಡ್‌ನೈಟ್ ಬ್ಲ್ಯಾಕ್, ಫ್ಲೆಮಿಂಗೊ ಪಿಂಕ್ ಮತ್ತು ಸೇಜ್ ಗ್ರೀನ್ ಎಂಬ ಮೂರು ಹೊಸ ಬಣ್ಣಗಳಲ್ಲಿ ಈ ಸ್ಮಾರ್ಟ್ ವಾಚ್ ಬರ್ತಾ ಇದೆ.
ಈ ಸ್ಮಾರ್ಟ್ ನ ಹೊಸ ಆವೃತ್ತಿಯಲ್ಲಿ 68ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಾಗಿದೆ. ಆದ್ರೆ ಇದು ಬಾರೊಮೆಟ್ರಿಕ್ ಆಲ್ಟಿಮೀಟರ್ ಅನ್ನು ಹೊಂದಿಲ್ಲ. ಸ್ಮಾರ್ಟ್ ವಾಚ್‌ನ ಉಳಿದ ವೈಶಿಷ್ಟ್ಯಗಳು ಹಳೆಯ ಆವೃತ್ತಿಯಂತೆಯೇ ಇರುತ್ತವೆ. Amazfit GTS 2 Mini ಹೊಸ ಆವೃತ್ತಿಯು 354 x 306 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಈ ವಾಚ್ ಅಲ್ಯೂಮಿನಿಯಂ ಮಿಶ್ರಲೋಹದಿಂದ ಮಾಡಲ್ಪಟ್ಟಿದೆ. ವಾಚ್‌ನ ಒಟ್ಟು ತೂಕ 19.5 ಗ್ರಾಂ.
ಹೃದಯ ಬಡಿತದ ಟ್ರ್ಯಾಕಿಂಗ್‌ಗಾಗಿ ಬಯೋಟ್ರಾಕರ್ 2 PPG ಸೆನ್ಸಾರ್ ಅಳವಡಿಸಲಾಗಿದೆ. ಗೈರೊಸ್ಕೋಪ್ ಸೆನ್ಸಾರ್, ಆಂಬಿಯೆನ್ಸ್ ಲೈಟ್ ಸೆನ್ಸಾರ್ ಕೂಡ ಇದರಲ್ಲಿದೆ. ನೀವು ಸರಿಯಾಗಿ ನಿದ್ದೆ ಮಾಡ್ತಿದ್ದೀರೋ ಇಲ್ವೋ ಅನ್ನೋದನ್ನು ಕೂಡ ಇದು ಪತ್ತೆ ಮಾಡುತ್ತದೆ. ಇನ್ನೊಂದು ವಿಶೇಷತೆ ಅಂದ್ರೆ ಈ ವಾಚ್ ಅನ್ನು ಒಮ್ಮೆ ಚಾರ್ಜ್ ಮಾಡಿದ್ರೆ 7 ರಿಂದ 21 ದಿನಗಳವರೆಗೆ ಇದು ಆರಾಮಾಗಿ ಕಾರ್ಯನಿರ್ವಹಿಸುತ್ತದೆ.
ನೋಟಿಫಿಕೇಶನ್, ಫೋನ್ ಕಾಲ್, ಕ್ಯಾಮರಾ ಆಪರೇಟಿಂಗ್, ಮ್ಯೂಸಿಕ್ ಕಂಟ್ರೋಲ್ ನಂತಹ ಸಾಮಾನ್ಯ ಫೀಚರ್ ಗಳು ಕೂಡ ಇದರಲ್ಲಿವೆ. ವಾಟರ್ ರೆಸಿಸ್ಟೆನ್ಸ್ ಕೂಡ ಇರುವುದರಿಂದ ಈಜುವಾಗಲೂ ಆರಾಮಾಗಿ ಧರಿಸಬಹುದು.