
ಈ ಭೂಮಿ ಮೇಲೆ ಪ್ರತಿಭಾವಂತರಿಗೇನೂ ಕೊರತೆಯಿಲ್ಲ. ಇಂತಹ ಪ್ರತಿಭಾವಂತರಿಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೇ ವೇದಿಕೆಯಾಗಿವೆ. ಈಗ ಬಾಲಕಿಯೊಬ್ಬಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎರಡೂ ಕೈಗಳಿಂದ್ಲೂ ಒಮ್ಮೆಲೇ ಬರೆಯುತ್ತಾಳೆ ಈಕೆ. ಇದನ್ನು ನೋಡಿದವರೆಲ್ಲ ವಿಸ್ಮಿತರಾಗಿದ್ದಾರೆ.
ಕಪ್ಪು ಬೋರ್ಡ್ ಮೇಲೆ ಬಾಲಕಿ ತನ್ನ ಎರಡೂ ಕೈಗಳಲ್ಲಿ ಸೀಮೆಸುಣ್ಣದಿಂದ ಬರೆಯುತ್ತಿರುವುದನ್ನು ನೀವು ವಿಡಿಯೊದಲ್ಲಿ ನೋಡಬಹುದು. ಅವಳು ಒಂದೇ ಸಮಯದಲ್ಲಿ ತನ್ನ ಎರಡೂ ಕೈಗಳ ಸಹಾಯದಿಂದ ಅತ್ಯಂತ ವೇಗದಲ್ಲಿ ಬರೆಯುತ್ತಾಳೆ. ಈಕೆಯ ಹೆಸರು ಆದಿ ಸ್ವರೂಪ ಅಂತ ಹೇಳಲಾಗ್ತಿದೆ. ಇವರು ವಿಶ್ವ ದಾಖಲೆ ಕೂಡ ಮಾಡಿದ್ದಾಳೆ. ಎರಡೂ ಕೈಗಳಿಂದ ಹಿಂದಿ, ಇಂಗ್ಲಿಷ್, ಕನ್ನಡ ಸೇರಿದಂತೆ 10 ಭಾಷೆಗಳಲ್ಲಿ ಬರೆಯಬಲ್ಲಳು.
ಟ್ವಿಟರ್ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ತುಳು ಹಾಗೂ ಮಲಯಾಳಂನಲ್ಲೂ ವಿಶಿಷ್ಟವಾಗಿ ಬರೆಯಬಲ್ಲ ಪ್ರತಿಭಾವಂತೆ ಆದಿ ಸ್ವರೂಪ. ವಿಡಿಯೋ ನೋಡಿದವರೆಲ್ಲ ಬಾಲಕಿಯ ಪ್ರತಿಭೆಯನ್ನು ಹೊಗಳ್ತಿದ್ದಾರೆ. ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ವಿಡಿಯೋಗೆ ಸಾವಿರಾರು ಕಾಮೆಂಟ್‌ಗಳು ಬಂದಿವೆ.