alex Certify ಒಮಿಕ್ರಾನ್ ಭೀತಿ, ಐದು ಜಿಲ್ಲೆಗಳ‌ಲ್ಲಿ ಕಠಿಣ ನಿಯಮ ಹೇರಿದ ಹರಿಯಾಣ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಭೀತಿ, ಐದು ಜಿಲ್ಲೆಗಳ‌ಲ್ಲಿ ಕಠಿಣ ನಿಯಮ ಹೇರಿದ ಹರಿಯಾಣ ಸರ್ಕಾರ

Postponed films, reduced occupancy: Multiplexes could face tough times amid  second wave of COVID-19 - The Weekಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳು ಮತ್ತು ಒಮಿಕ್ರಾನ್ ನಿಯಂತ್ರಿಸಲು, ಹರಿಯಾಣ ಸರ್ಕಾರ ಶನಿವಾರ ಐದು ಜಿಲ್ಲೆಗಳಲ್ಲಿ ಜನವರಿ 2 ರಿಂದ ಜನವರಿ 12 ರವರೆಗೆ ಹೊಸ ನಿರ್ಬಂಧಗಳನ್ನು ಘೋಷಿಸಿದೆ. ಗುರುಗ್ರಾಮ, ಫರಿದಾಬಾದ್, ಅಂಬಾಲಾ, ಪಂಚಕುಲ ಮತ್ತು ಸೋನಿಪತ್ ಜಿಲ್ಲೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.

ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಐದು ಜಿಲ್ಲೆಗಳಲ್ಲಿ ಚಿತ್ರಮಂದಿರಗಳು, ಈಜುಕೊಳ ಮತ್ತು ಕ್ರೀಡಾ ಸಂಕೀರ್ಣಗಳನ್ನು ಮುಚ್ಚಲಾಗಿದೆ. ಮಾಲ್ ಹಾಗೂ ಮಾರುಕಟ್ಟೆಗಳಿಗೆ ಸಂಜೆ 5 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳು ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟು ಮಾತ್ರ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ತುರ್ತು ಮತ್ತು ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳನ್ನು ಹೊರತುಪಡಿಸಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕೇವಲ 50 ಪ್ರತಿಶತದಷ್ಟು ಸಿಬ್ಬಂದಿ ಹಾಜರಾತಿಯೊಂದಿಗೆ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಾದ ಮಾರುಕಟ್ಟೆ, ಸಾರ್ವಜನಿಕ ಸಾರಿಗೆ, ಉದ್ಯಾನವನಗಳು, ಧಾರ್ಮಿಕ ಸ್ಥಳಗಳು, ಬಾರ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು, ಪಡಿತರ ಅಂಗಡಿಗಳು, ಮದ್ಯ ಮತ್ತು ವೈನ್ ಅಂಗಡಿಗಳಂತಹ ಸಾರ್ವಜನಿಕ ಸ್ಥಳಗಳಿಗೆ ಸಂಪೂರ್ಣವಾಗಿ ಲಸಿಕೆ ಹಾಕಿದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಿಸಲು ಅನುಮತಿಸಲಾಗಿದೆ.

ರಾಜ್ಯದ ಇತರ ಜಿಲ್ಲೆಗಳಲ್ಲಿ, ಚಲನಚಿತ್ರ ಮಂದಿರಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು, ಜಿಮ್‌ಗಳು, ಸ್ಪಾಗಳು ಮತ್ತು ಕ್ಲಬ್‌ಹೌಸ್‌ಗಳು ಅಗತ್ಯವಿರುವ ಸಾಮಾಜಿಕ ಅಂತರವನ್ನು ಅನುಸರಿಸುವುದರೊಂದಿಗೆ 50% ಆಸನ ಸಾಮರ್ಥ್ಯದೊಂದಿಗೆ ತೆರೆಯಲು ಅನುಮತಿಸಲಾಗಿದೆ. ಇದಕ್ಕೂ ಮೊದಲು, ಹರಿಯಾಣ ಸರ್ಕಾರವು ರಾಜ್ಯಾದ್ಯಂತ ರಾತ್ರಿ 11 ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ವಿಧಿಸಿತ್ತು. ಒಂದೇ ದಿನದಲ್ಲಿ 26 ಒಮಿಕ್ರಾನ್ ಪ್ರಕರಣ ಪತ್ತೆಯಾದ ನಂತರ ಹರಿಯಾಣ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...