ಒಮಿಕ್ರಾನ್ ರೂಪಾಂತರವು ಭಾರತಕ್ಕೆ ಆಗಮಿಸಿ ತಿಂಗಳಾಗ್ತಿದೆ. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಒಮಿಕ್ರಾನ್ ಡೆಲ್ಟಾಕ್ಕಿಂತಲೂ ಹೆಚ್ಚು ಅಪಾಯಕಾರಿ ಅಂತಾ ಗೊತ್ತಾಗುತ್ತಿದೆ. ಒಮಿಕ್ರಾನ್ ಒಡೆತದಿಂದ ಯುರೋಪ್ ಮತ್ತು ಯುಎಸ್‌ನಾದ್ಯಂತ ಪ್ರಕರಣಗಳಲ್ಲಿ ತೀವ್ರಗತಿಯ ಹೆಚ್ಚಳವಾಗಿದೆ. ಎರಡನೇ ಅಲೆ ನಂತರ ಲಯ ಕಂಡುಕೊಂಡಿರೊ ಭಾರತಕ್ಕೆ ಒಮಿಕ್ರಾನ್ ನಿಂದ ಮೂರನೇ ಅಲೆ ಎದುರಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗತ್ತ ಅನ್ನೋ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ. ಇತ್ತ ರಾಜ್ಯದ ಸಿಎಂ ಒಬ್ಬರು ಈಗಾಗ್ಲೇ ಮೂರಲೇ ಅಲೆ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಪ್ರಕರಣಗಳನ್ನ ನಿಯಂತ್ರಿಸಲು ರಾಜ್ಯ ಸರ್ಕಾರ ಸಾಕಷ್ಟು ತಯಾರಿ ನಡೆಸಿಕೊಳ್ಳುತ್ತಿದೆ. ಈ ಬಗ್ಗೆ ಮಾತನಾಡಿರೊ ಬಿಹಾರದ ಸಿಎಂ ನಿತೀಷ್ ಕುಮಾರ್ ಮೂರನೇ ಅಲೆ ಈಗಾಗಲೇ ಬಂದಿದೆ ಎಂದು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆ ಈಗಾಗಲೇ ಪ್ರಾರಂಭವಾಗಿದೆ ಮತ್ತು ಅದರಿಂದ ಜನರನ್ನು ರಕ್ಷಿಸಲು ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಫೆಬ್ರವರಿ 3, 2020 ರ ವೇಳೆಗೆ ಭಾರತದಲ್ಲಿ ಕೊರೋನವೈರಸ್ ಸಾಂಕ್ರಾಮಿಕದ ಮೂರನೇ ತರಂಗವು ಉತ್ತುಂಗಕ್ಕೇರಬಹುದು ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಸದಸ್ಯರ ಪ್ರಕಾರ, ಮೂರನೇ ತರಂಗವು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಆಗಮಿಸಲಿದೆ. ಭಾರತವು ಒಮಿಕ್ರಾನ್‌ನಿಂದಲೆ ಥರ್ಡ್ ವೇವ್ ಅನ್ನು ಅನುಭವಿಸುತ್ತದೆ, ಆದರೆ ಇದು ಎರಡನೇ ತರಂಗಕ್ಕಿಂತ ಸೌಮ್ಯವಾಗಿರುತ್ತದೆ. “ಮೂರನೇ ತರಂಗವು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂಬುದು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಅಧ್ಯಕ್ಷ ವಿದ್ಯಾಸಾಗರ್ ಅವರ ಅಭಿಪ್ರಾಯ.