![](https://kannadadunia.com/wp-content/uploads/2021/11/dcdc1c84-0ffc-4bf6-8516-254e929dae38.jpg)
ಬೆಂಗಳೂರು: ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೆಟ್ರೋ ಪ್ರಯಾಣಕ್ಕೆ ಮಾಸ್ಕ್ ಕಡ್ಡಾಯವಾಗಿದ್ದು, ಮಾಸ್ಕ್ ಇಲ್ಲದೇ ಪ್ರಯಾಣಿಸುವವರಿಗೆ ನಿರ್ಬಂಧ ವಿಧಿಸಲಾಗಿದೆ.
ಕೋವಿಡ್ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಿರುವ ಬೆಂಗಳೂರು ಮೆಟ್ರೋ ನಿಗಮ ಮೆಟ್ರೋ ಸ್ಟೇಷನ್, ಮೆಟ್ರೋ ಬೋಗಿ ಒಳಗೆ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಮಹೀಂದ್ರಾ ತೆಕ್ಕೆಗೆ ಬಿಎಸ್‌ಎ ಮೋಟಾರ್ ಸೈಕಲ್ಸ್
ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಕೇಸ್ ಇಳಿಕೆಯಾಗುತ್ತಿದ್ದಂತೆ ಜನ ಮಾಸ್ಕ್, ಸಾಮಾಜಿಕ ಅಂತರ ಪಾಲನೆಯನ್ನು ಮರೆತಿದ್ದರು. ಆದರೆ ಇದೀಗ ರೂಪಾಂತರಿ ಒಮಿಕ್ರಾನ್ ಆತಂಕದಿಂದ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಮಾಸ್ಕ್, ಸಾಮಾಜಿಕ ಅಂತರದ ಮೇಲೆ ಬಿಬಿಎಂಪಿ ಮಾರ್ಷಲ್ ಗಳು ನಿಗಾ ವಹಿಸಿದ್ದು, ಪರಿಶೀಲನೆ ನಡೆಸಿದ್ದಾರೆ.