ಬಹುತೇಕ ಎಲ್ಲರೂ ತಮ್ಮ ದಿನವನ್ನು 1 ಕಪ್ ಚಹಾದೊಂದಿಗೆ ಪ್ರಾರಂಭಿಸಲು ಬಯಸುತ್ತಾರೆ. ಚಹಾ ಸಿಕ್ಕಿಲ್ಲವೆಂದ್ರೆ ಆಲಸ್ಯ ಕಡಿಮೆಯಾಗುವುದಿಲ್ಲ. ದಣಿವನ್ನು ದೂರಮಾಡಿ ಉತ್ಸಾಹ ತುಂಬುವ ಶಕ್ತಿ ಟೀಗಿದೆ. ಇಷ್ಟು ಮಾತ್ರವಲ್ಲ ಟೀ ಖಿನ್ನತೆಯನ್ನು ದೂರ ಮಾಡುತ್ತದೆಯಂತೆ.
ಯಸ್. ಇದನ್ನು ನಾವು ಹೇಳ್ತಿಲ್ಲ. ಸಂಶೋಧನೆಯಲ್ಲಿ ಹೇಳಲಾಗಿದೆ. ಜಪಾನಿನ ಮಾಚಾ ಚಹಾ ಕುಡಿದ್ರೆ ಖಿನ್ನತೆ ದೂರವಾಗುತ್ತದೆ ಎಂದು ಸಂಶೋಧಕರು ಹೇಳಿದ್ದರು. ಮಾಚಾ ಚಹಾ ಹಸಿರಾಗಿರುತ್ತದೆ. ಮಾಚಾ ಚಹಾ ಸಸ್ಯಗಳನ್ನು ಸಾಮಾನ್ಯವಾಗಿ ನೆರಳಿನ ಸ್ಥಳಗಳಲ್ಲಿ ಬೆಳೆಯಲಾಗುತ್ತದೆಯಂತೆ.
ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದಕ್ಕಿದೆ. ಮಾಚಾ ಟೀಯಿಂದ ಇಲಿಗಳ ಒತ್ತಡ ಮತ್ತು ಒತ್ತಡದ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿತ್ತು. ಇದು ಮಾನಸಿಕ ತೊಂದರೆಗಳನ್ನು ನಿವಾರಿಸುವುದರ ಜೊತೆಗೆ ಕ್ಯಾನ್ಸರ್ ಮತ್ತು ಬೊಜ್ಜಿನಂತಹ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಈ ಚಹಾವು ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದೆ. 3-4 ತಿಂಗಳು ಪ್ರತಿದಿನ ಕುಡಿಯುತ್ತಿದ್ದರೆ ಇದು ದೇಹದ ಕೊಬ್ಬನ್ನು ಸಹ ಕಡಿಮೆ ಮಾಡುತ್ತದೆ.