ಕೆಲಸದ ಒತ್ತಡದಿಂದ ತಲೆನೋವು ಕಾಡಿದಾಗ ತಕ್ಷಣ ನೆನಪಾಗುವುದೇ ಮಾತ್ರೆ. ಒಂದು ಮಾತ್ರೆ ನುಂಗಿ ಅರ್ಧ ಲೋಟ ನೀರು ಕುಡಿದು ತಲೆನೋವು ಕಡಿಮೆಯಾಯಿತು ಎಂದುಕೊಳ್ಳುತ್ತೇವೆ. ಅದು ತಪ್ಪು. ಮಾತ್ರೆಯಿಂದ ದೇಹದ ಮೇಲೆ ಹಲವು ಅಡ್ಡಪರಿಣಾಮಗಳಾಗುತ್ತವೆ.
ಒಂದು ಮಾತ್ರೆ ತಿಂದರೆ ಕನಿಷ್ಟ ಮೂರರಿಂದ ನಾಲ್ಕು ಲೋಟ ಹೆಚ್ಚು ನೀರು ಕುಡಿಯಬೇಕು. ಇಲ್ಲವಾದರೆ ಅದು ದೇಹದ ಹಲವು ಭಾಗಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಹಾಗಾಗಿ ತಲೆನೋವು ಎಂದಾಕ್ಷಣ ಮಾತ್ರೆ ತಿನ್ನುವ ಬದಲು ಈ ಮನೆ ಮದ್ದನ್ನು ಪಾಲಿಸಿ ನೋಡಿ.
ಜಾಯಿಕಾಯಿ ಪುಡಿ ಮಾಡಿ. ತಲೆನೋವು ಬಂದಾಗ ಅದನ್ನು ಬಿಸಿನೀರಿನಲ್ಲಿ ಕಲಸಿ ಕುಡಿದು ನೋಡಿ. ಒಂದು ಗಂಟೆಯೊಳಗೆ ನಿಮ್ಮ ತಲೆನೋವು ಮಾಯವಾಗುತ್ತದೆ.
ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಬೆರೆಸಿ ನಿಧಾನಕ್ಕೆ ಹಣೆಯ ಮೇಲೆ ಹಚ್ಚಿ. ಇದರಿಂದಲೂ ತಲೆನೋವು ಕಡಿಮೆಯಾಗುತ್ತದೆ. ಬಸಳೆ ಸೊಪ್ಪಿನ ರಸದಿಂದಲೂ ಇದೇ ಪರಿಣಾಮ ಪಡೆಯಬಹುದು. ಕ್ಯಾರೆಟ್ ಮತ್ತು ಪಾಲಕ್ ಸೊಪ್ಪಿನ ರಸವನ್ನು ಬೆರೆಸಿ ಕುಡಿಯುವುದರಿಂದ ಮೈಗ್ರೇನ್ ತಲೆ ನೋವನ್ನು ಕಡಿಮೆ ಮಾಡಬಹುದು.