ಜೀವನ ಅನ್ನೋದು ಬಹಳ ಒತ್ತಡದಿಂದ ಕೂಡಿರುತ್ತದೆ. ಸೋಮವಾರ ಬಂತು ಅಂದ್ರೆ ವಾರವಿಡೀ ಮಾಡಬೇಕಾದ ಕೆಲಸದ ಟೆನ್ಷನ್. ಬದುಕಿನ ಜಂಜಾಟಗಳು, ಯಾಂತ್ರಿಕತೆ ಇವೆಲ್ಲ ನಮ್ಮ ಉತ್ಸಾಹವನ್ನೇ ಕುಗ್ಗಿಸಿಬಿಡುತ್ತವೆ. ಆದ್ರೆ ಜರ್ಮನಿ ಯೂನಿವರ್ಸಿಟಿಯ ವಿಜ್ಞಾನಿಗಳು ಒತ್ತಡದಲ್ಲೂ ಇರುವ ಪಾಸಿಟಿವ್ ಅಂಶಗಳನ್ನು ಪತ್ತೆ ಮಾಡಿದ್ದಾರೆ.
ದಿನದಲ್ಲಿ ಮೂರು ಬಾರಿ ಡೈರಿಯಲ್ಲಿ ಕೆಲಸದ ಒತ್ತಡದ ಬಗ್ಗೆ ಬರೆಯುವಂತೆ ಅವರಿಗೆ ಸೂಚಿಸಲಾಗಿತ್ತು. ಕೆಲಸದ ಒತ್ತಡವನ್ನು ನಿಭಾಯಿಸಲು ಯಾರು ಯಾವ ರೀತಿ ಉಪಾಯಗಳನ್ನು ಮಾಡಿದ್ದಾರೆ ಅನ್ನೋದನ್ನು ಪರಿಶೀಲಿಸುವುದು ಸಂಶೋಧಕರ ಉದ್ದೇಶ.
ದಿನದ ಅಂತ್ಯದಲ್ಲಿ ಯಾವ ರೀತಿ ಕೆಲಸದಲ್ಲಿ ಮೇಲುಗೈ ಸಾಧಿಸಿದ್ದಾರೆ ಅನ್ನೋದನ್ನು ಎಲ್ಲಾ ಉದ್ಯೋಗಿಗಳೂ ವಿವರಿಸಬೇಕು. ಇದರ ಫಲಿತಾಂಶ ಏನಂದ್ರೆ ಯಾರು ಒತ್ತಡವನ್ನು ಹೊಂದಿರುತ್ತಾರೋ ಅವರು ಅತ್ಯಂತ ಶಕ್ತಿಶಾಲಿ ವಿಧಾನಗಳ ಮೂಲಕ ತಮ್ಮ ಕೆಲಸಗಳನ್ನು ನಿಭಾಯಿಸಲು ಸಮರ್ಥರಾಗಿರುತ್ತಾರೆ.
ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಅವು ರಾತ್ರೋರಾತ್ರಿ ಕಣ್ಮರೆಯಾಗಲು ಕೂಡ ಸಾಧ್ಯವಿಲ್ಲ. ಪಾಸಿಟಿವ್ ಮನಸ್ಥಿತಿ ಹೊಂದಿದ್ರೆ ಎಲ್ಲಾ ಪರಿಸ್ಥಿತಿಗಳನ್ನು ಕೂಡ ನಿಭಾಯಿಸಬಹುದು. ಹಾಗಾಗಿ ಒತ್ತಡ ಹೊಸದೇನನ್ನಾದ್ರೂ ಕಲಿಯಲು ಏನಾದ್ರೂ ಸಾಧನೆ ಮಾಡಲು ಅವಕಾಶ ಕಲ್ಪಿಸುತ್ತದೆ.