ಬೇಸಿಗೆಯಲ್ಲಿ ಅತಿಯಾದ ಉಷ್ಣದ ಪರಿಣಾಮವಾಗಿ ಒಣ ಕೆಮ್ಮು ಅಥವಾ ಹೊಟ್ಟು ಕೆಮ್ಮು ಉಂಟಾಗುತ್ತದೆ.
ಕಡಿಮೆಯಾಗುತ್ತದೆ ಎಂದು ಈ ಕೆಮ್ಮನ್ನು ಅಲಕ್ಷಿಸಿದರೆ ಅದರಿಂದ ತೀವ್ರತರನಾದ ತೊಂದರೆ ಅನುಭವಿಸಬೇಕಾದೀತು. ಆದ್ದರಿಂದ ಕೆಮ್ಮಿನ ತೊಂದರೆ ಆರಂಭವಾದ ಕೂಡಲೇ ಈ ಮನೆ ಮದ್ದನ್ನು ಉಪಯೋಗಿಸಿ ತೊಂದರೆ ನಿವಾರಿಸಿಕೊಳ್ಳಿ.
ಮೊದಲು ಸ್ವಲ್ಪ ಜೇಷ್ಟಮಧುವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಿ. ನಂತರ ಅರ್ಧ ಚಮಚ ಜೇಷ್ಟಮಧುವಿನ ಪುಡಿಗೆ, ಲಿಂಬೆ ರಸ ಹಾಗೂ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ. ದಿನಕ್ಕೆ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಿದರೆ ಒಣ ಕೆಮ್ಮು ಕಡಿಮೆಯಾಗುತ್ತದೆ.
ಜೀರಿಗೆಯನ್ನು ಚೆನ್ನಾಗಿ ಹುರಿದು ಪುಡಿ ಮಾಡಿಕೊಳ್ಳಿ. ನಂತರ ಅರ್ಧ ಚಮಚ ಜೀರಿಗೆ ಪುಡಿಗೆ ಒಂದು ಚಮಚದಷ್ಟು ತುಪ್ಪವನ್ನು ಹಾಕಿ, ಚೆನ್ನಾಗಿ ಕಲಸಿಕೊಂಡು ದಿನಕ್ಕೆರಡು ಸಲ ಸೇವಿಸಿದರೆ ಕೆಮ್ಮಿನ ಪ್ರಮಾಣ ಕಡಿಮೆಯಾಗುತ್ತದೆ.
ಅಮೃತ ಬಳ್ಳಿಯ ಒಂದು ಎಲೆಯನ್ನು ತೆಗೆದುಕೊಂಡು, ಸ್ವಲ್ಪ (4 ಹರಳು) ಉಪ್ಪಿನ ಕಾಳಿನೊಂದಿಗೆ ದಿನಕ್ಕೆ 3 ರಿಂದ 4 ಸಲ ಜಗಿದರೆ ಕೆಮ್ಮು ಗುಣಮುಖವಾಗುತ್ತದೆ.
ಒಣ ಕೆಮ್ಮಿನೊಂದಿಗೆ, ಗಂಟಲು ಉರಿ ಅಥವಾ ಸ್ವರಬೇಧ ಇದ್ದಲ್ಲಿ ಎರಡು ಎಸಳು ಬೆಳ್ಳುಳ್ಳಿಯನ್ನು ಸ್ವಲ್ಪ ಬೆಲ್ಲದೊಂದಿಗೆ ಸೇವಿಸಬೇಕು. ಇದರಿಂದ ಕೆಮ್ಮಿನಿಂದ ಉಂಟಾಗುತ್ತಿರುವ ಗಂಟಲು ಉರಿ ಮತ್ತು ಸ್ವರಬೇಧ ಕಡಿಮೆಯಾಗುತ್ತದೆ.