ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೆ ಅನುತ್ಪಾದಕ ಕೆಮ್ಮು. ಒಣಕೆಮ್ಮಿಗೆ ಕಾರಣಗಳು ಹಲವಿದ್ದರೂ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ.
ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಒಣಕೆಮ್ಮನ್ನು ಕಡಿಮೆ ಮಾಡಬಹುದು.
ಅರ್ಧ ಚಮಚ ಜೇಷ್ಟಮಧು, ಒಂದು ಚಮಚ ಜೇನುತುಪ್ಪ ಮತ್ತು ಹತ್ತು ತುಳಸಿ ಎಲೆಗಳನ್ನು ಜೊತೆಯಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಊಟದ ಬಳಿಕ ಮೂರು ಬಾರಿ ಸೇವಿಸಿ.
ಎರಡು ಚಿಟಿಕೆ ಕಾಳು ಮೆಣಸಿನ ಪುಡಿ, ಅರ್ಧ ಚಮಚ ಕಲ್ಲು ಸಕ್ಕರೆ ಮತ್ತು ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ, ಮಿಶ್ರಣವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬೇಕು.
ನಾಲ್ಕರಿಂದ ಐದು ಲವಂಗವನ್ನು ಹುರಿದ ತುಳಸಿ ಎಲೆಯನ್ನು ಸೇರಿಸಿ ಹಾಗೆಯೇ ಜಗಿದು ತಿನ್ನಬೇಕು. ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
ಅರ್ಧ ಇಂಚು ಅರಿಶಿನ ಕೊಂಬನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ರಾತ್ರಿ ಹೊತ್ತು ಮಲಗುವಾಗ ಬಾಯಲ್ಲಿ ಹಾಗೆ ಇಟ್ಟುಕೊಳ್ಳಬೇಕು. ನಂತರ ಇದನ್ನು ಜಗಿದು ತಿನ್ನಬೇಕು. ಹೀಗೆ ಮಾಡುವುದರಿಂದ ಒಣ ಕೆಮ್ಮು ಕಡಿಮೆಯಾಗುತ್ತದೆ.