
ಒಣ ಕೂದಲು ಹೊಂದಿರುವವರು ವಾತಾವರಣ ಬದಲಾದ ಹಾಗೇ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಕೂದಲಿನ ಸಮಸ್ಯೆಯನ್ನು ನಿವಾರಿಸಲು ಅವರು ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸುವ ಬದಲು ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಕಂಡೀಷನರ್ ನ್ನು ಬಳಸಿ ಕೂದಲಿಗೆ ಆರೋಗ್ಯಕರ ಹೊಳಪನ್ನು ನೀಡಿ.
1 ಚಮಚ ಬಾದಾಮಿ ಎಣ್ಣೆ, 1 ಚಮಚ ಅಲೋವೆರಾ ಜೆಲ್, 1 ಚಮಚ ಜೇನುತುಪ್ಪ, ಈ ಮೂರನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ ಕನಿಷ್ಠ 1 ಗಂಟೆಗಳ ಕಾಲ ಬಿಡಿ. ಬಳಿಕ ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೆರಡು ಬಾರಿ ಬಳಸಿ.
1 ಚಮಚ ತೆಂಗಿನೆಣ್ಣೆ, 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ಕೂದಲಿಗೆ 15 ನಿಮಿಷಗಳ ಕಾಲ ಮಸಾಜ್ ಮಾಡಿ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದನ್ನು ವಾರಕ್ಕೊಮ್ಮೆಯಾದರೂ ಮಾಡಿ.