ಒಣದ್ರಾಕ್ಷಿಯಲ್ಲಿ ಐರನ್, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನಿಶಿಯಮ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಮಾಡುತ್ತದೆ.
ಒಣ ದ್ರಾಕ್ಷಿ ನೀರು ಸೇವನೆಯಿಂದ ಮೂತ್ರಪಿಂಡವು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇದು ಶರೀರದಲ್ಲಿ ಇರುವ ಟ್ಯಾಕ್ಸಿನ್ ಅನ್ನು ಹೊರ ತರುತ್ತದೆ. ಇದರಿಂದ ಯಕೃತ್ ಸಮಸ್ಯೆ ನಿವಾರಣೆ ಆಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಅಲರ್ಜಿ ಮತ್ತು ರೋಗಗಳ ಭಯ ಇರುವುದಿಲ್ಲ. ಒಣ ದ್ರಾಕ್ಷಿ ಸೇವನೆ ಮಾಡುತ್ತಾ ಬಂದರೆ ಜೀರ್ಣಕ್ರಿಯೆ ಸಕ್ರಿಯವಾಗಿ ನಡೆಯುತ್ತದೆ. ಮಲಬದ್ಧತೆ, ಅಸಿಡಿಟಿ ನಿವಾರಣೆ ಆಗುತ್ತದೆ. ರಕ್ತ ಶುದ್ಧಿ ಆಗಿ ಇದರಿಂದ ಮುಖದ ಮೇಲೆ ಮೊಡವೆಗಳು ಮೂಡುವುದು ನಿಲ್ಲುತ್ತದೆ.
ಒಣ ದ್ರಾಕ್ಷಿಯಲ್ಲಿ ಆಂಟಿ ಬ್ಯಾಕ್ಟೀರಿಯಾ ಮತ್ತು ಆಂಟಿ ಫಂಗಲ್ ಅಂಶ ಹೆಚ್ಚಾಗಿರುವುದರಿಂದ ಕೆರೆತ ಮೊದಲಾದ ಚರ್ಮ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಒಣ ದ್ರಾಕ್ಷಿ ನೀರು, ಕೆಟ್ಟ ಕೊಬ್ಬನ್ನು ಇಳಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋ ಹೈಡ್ರೇಟ್ ಇರುವುದರಿಂದ ತೂಕ ಹೆಚ್ಚಿಸಿಕೊಳ್ಳಲು ಸಹಕಾರಿ.