ರಾಜ್ಯ ಒಕ್ಕಲಿಗರ ಸಂಘದ ನೌಕರರಿಗೆ ಬಂಪರ್ ಕೊಡುಗೆ ನೀಡಲಾಗಿದೆ. ನೌಕರರ ಬಹುದಿನಗಳ ಬೇಡಿಕೆಯಂತೆ ಆರನೇ ವೇತನ ಶ್ರೇಣಿಯನ್ನು ಅಂಗೀಕರಿಸಲಾಗಿದ್ದು, ಜುಲೈ 1ರಿಂದ ಇದು ಜಾರಿಗೊಳ್ಳಲಿದೆ.
ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ 1500 ಕ್ಕೂ ಅಧಿಕ ನೌಕರರಿಗೆ ಇದರಿಂದ ಅನುಕೂಲವಾಗಲಿದೆ.
ಅಲ್ಲದೆ ಕ್ರೋಡಿಕೃತ ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದ 400ಕ್ಕೂ ಅಧಿಕ ನೌಕರರನ್ನು ಕಾಯಂ ಮಾಡಲು ಸಹ ಆಡಳಿತ ಮಂಡಳಿ ತೀರ್ಮಾನಿಸಿದೆ.