ಮೂರು ವರ್ಷಗಳ ಹಿಂದೆ ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಜಗತ್ತನ್ನು ಇನ್ನೂ ಬಾಧಿಸುತ್ತಲೇ ಇದೆ. ಇದಕ್ಕೆ ಈಗಾಗಲೇ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ಬಲಿಯಾಗಿದ್ದು, ಚೀನಾದಲ್ಲಿ ಇದರ ಅಬ್ಬರ ಇನ್ನೂ ಕೂಡ ಮುಂದುವರೆದಿದೆ.
ಇದರ ಮಧ್ಯೆ ಒಂದೇ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 800 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು ತಗಲಿದ್ದು, ಅವರನ್ನು ಕೆಳಗಿಳಿಸುವ ಕುರಿತಂತೆ ಈಗ ಚರ್ಚೆ ನಡೆಯುತ್ತಿದೆ. ಇಂತಹದೊಂದು ಘಟನೆ ಆಸ್ಟ್ರೇಲಿಯಾದ ಸಿಡ್ನಿ ನಗರದ ಬಂದರಿನಲ್ಲಿ ನಡೆದಿದೆ.
ಸಿಡ್ನಿ ಬಂದರಿನಲ್ಲಿ ಲಂಗರು ಹಾಕಿರುವ ‘ಮೆಜೆಸ್ಟಿಕ್ ಪ್ರಿನ್ಸೆಸ್’ ಹಡಗಿನ 800 ಮಂದಿ ಪ್ರಯಾಣಿಕರಿಗೆ ಕೋವಿಡ್ ದೃಢಪಟ್ಟಿದ್ದು, ಹೀಗಾಗಿ ಕೋವಿಡ್ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರುಗಳಿಗೆ ಸೂಚಿಸಲಾಗಿದೆ. ಹಡಗಿನಲ್ಲಿಯೇ ಕ್ವಾರಂಟೈನ್ ಮಾಡುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ.