ಇದು ಬೇಸಿಗೆ ಕಾಲ. ಮಾವಿನ ಜ್ಯೂಸ್, ಕೋಕಂ, ಮಜ್ಜಿಗೆ ಎಲ್ಲರ ಅಚ್ಚುಮೆಚ್ಚಿನ ಪಾನೀಯ. ಬಿರು ಬೇಸಿಗೆಯಲ್ಲಿ ದೇಹಕ್ಕೆ ತಂಪೆನಿಸುವ ಈ ಪಾನೀಯ ಸೇವನೆಗೂ ಒಂದು ನಿಯಮವಿದೆ. ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಒಂದೇ ದಿನ ಈ ಮೂರೂ ಪಾನಿಯ ಸೇವನೆ ಮಾಡಿದ್ರೆ ಆರೋಗ್ಯ ಹದಗೆಡೋದ್ರಲ್ಲಿ ಸಂಶಯವಿಲ್ಲ.
ಈ ಮೂರು ಪಾನೀಯವನ್ನು ಒಟ್ಟಿಗೆ ಅಥವಾ ಒಂದೇ ದಿನ ಸೇವನೆ ಮಾಡುವುದರಿಂದ ದೇಹದಲ್ಲಿ ಆಮ್ಲ ಪ್ರಮಾಣ ಹೆಚ್ಚಾಗಿ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.
ಸೂರ್ಯಾಸ್ತದ ನಂತ್ರ ಈ ಪಾನಿಯ ಸೇವನೆ ಮಾಡಬಾರದು. ಸೂರ್ಯಾಸ್ತಕ್ಕಿಂತ ಮೊದಲೇ ಈ ಪಾನೀಯಗಳನ್ನು ಸೇವನೆ ಮಾಡಬೇಕು. ಜೀರ್ಣಕ್ರಿಯೆ ನಿಧಾನವಾಗುವ ಕಾರಣ ಸಂಜೆ ಸಮಯ ಅಥವಾ ಸೂರ್ಯಾಸ್ತದ ನಂತ್ರ ಇದ್ರ ಸೇವನೆ ಮಾಡಬೇಡಿ.
ಈ ಪಾನೀಯವನ್ನು ಬೇರೆ ಬೇರೆ ದಿನ ಸೇವನೆ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಮಾವಿನ ಕಾಯಿ ಜ್ಯೂಸ್ ಕುಡಿಯೋದ್ರಿಂದ ಬೇಸಿಗೆಯಲ್ಲಿ ಹೊಟ್ಟೆ ತಂಪಾಗಿರುತ್ತದೆ. ಎಸಿಡಿಟಿ ಆಗೋದಿಲ್ಲ. ಆಹಾರ ಸೇವನೆ ನಂತ್ರ ಇದನ್ನು ಕುಡಿಯೋದು ಒಳ್ಳೆಯದು.
ಮಜ್ಜಿಗೆ ದೇಹವನ್ನು ತಂಪಾಗಿಸುವ ಜೊತೆಗೆ ತೂಕ ಇಳಿಸಲು ಸಹಕಾರಿ. ಹಾಗೆ ಕೋಕಂ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಗ್ಯಾಸ್, ಎಸಿಡಿಟಿ, ಬೇಧಿಯಂತಹ ಸಮಸ್ಯೆಯಿಂದ ನಮ್ಮನ್ನು ದೂರವಿರಿಸುತ್ತದೆ.