alex Certify ಒಂದೇ ಕಂಪನಿಯಲ್ಲಿ ಸುದೀರ್ಘ 84 ವರ್ಷಗಳ ಕಾಲ ಉದ್ಯೋಗಿಯಾಗಿ ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದ ಶತಾಯುಷಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಂಪನಿಯಲ್ಲಿ ಸುದೀರ್ಘ 84 ವರ್ಷಗಳ ಕಾಲ ಉದ್ಯೋಗಿಯಾಗಿ ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದ ಶತಾಯುಷಿ..!

ಇಂದಿನ ಕಾಲದಲ್ಲಿ, ಒಂದೇ ಕಂಪನಿಯಲ್ಲಿ ಹೆಚ್ಚು ಸಮಯ ಕೆಲಸ ಮಾಡುವುದು ಬಹಳ ಕಡಿಮೆಯಾಗಿದೆ. ಜನರು ವೇತನ ಹೆಚ್ಚಳ, ಸ್ಥಾನ ಬದಲಾವಣೆ, ವಿಭಿನ್ನ ಉದ್ಯಮ ಹಾಗೂ ಇನ್ನಿತರೆ ಕಾರಣದಿಂದಾಗಿ ಉದ್ಯೋಗಗಳನ್ನು ಬದಲಾಯಿಸಲು ಇಷ್ಟಪಡುತ್ತಾರೆ. ಆದರೆ, ಇಲ್ಲೊಬ್ಬರು ಶತಾಯುಷಿ 84 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಗಿನ್ನಿಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

ವಾಲ್ಟರ್ ಆರ್ಥಮನ್ ಅವರು ಒಂದೇ ಕಂಪನಿಯಲ್ಲಿ ಸುದೀರ್ಘ ವೃತ್ತಿಜೀವನದ ಗಿನ್ನಿಸ್ ವಿಶ್ವ ದಾಖಲೆಯನ್ನು ಅಧಿಕೃತವಾಗಿ ಸ್ಥಾಪಿಸಿದ್ದಾರೆ. 100 ವರ್ಷ ವಯಸ್ಸಾಗಿರುವ ಆರ್ಥಮನ್, ಕಳೆದ ಎಂಟು ದಶಕಗಳಿಗಿಂತಲೂ ಹೆಚ್ಚು ಕಾಲ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದಲ್ಲಿರುವ ಜವಳಿ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.

ಆರ್ಥಮನ್ ಅವರು 15 ವರ್ಷ ವಯಸ್ಸಿನವರಾಗಿದ್ದಾಗ ಕಂಪನಿಯಲ್ಲಿ ಶಿಪ್ಪಿಂಗ್ ಸಹಾಯಕರಾಗಿ ಕೆಲಸ ಮಾಡಲು ಪ್ರಾರಂಭಿಸಿದ್ರು. ಸಾಂಟಾ ಕ್ಯಾಟರಿನಾದಲ್ಲಿನ ಸಣ್ಣ ಪಟ್ಟಣವಾದ ಬ್ರಸ್ಕ್‌ನಲ್ಲಿ ಬಡ ಕುಟುಂಬದಲ್ಲಿ ಜನಿಸಿದ್ದರು. ಅವರು ಅಧ್ಯಯನ ಮಾಡಲು ಶಾಲೆಗೆ ಬರಿಗಾಲಿನಲ್ಲಿ ನಡೆದು ನಂತರ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.

ಆರ್ಥಮನ್ ಕುಟುಂಬವು ಹಣಕಾಸಿನ ಹೋರಾಟದ ಮೂಲಕ ಸಾಗಿತ್ತು. ಇದರಿಂದ ಚಿಕ್ಕ ವಯಸ್ಸಿನಲ್ಲೇ ಅವರು ಕೆಲಸವನ್ನು ಪ್ರಾರಂಭಿಸುವಂತಾಯ್ತು. ಜರ್ಮನ್ ಭಾಷೆಯಲ್ಲಿನ ಅವರ ಪ್ರಾವೀಣ್ಯತೆಯಿಂದಾಗಿ ಅವರನ್ನು ಇಂಡಸ್ಟ್ರಿಯಾಸ್ ರೆನಾಕ್ಸ್ ಎಸ್‌ಎಯಲ್ಲಿ ನೇಮಿಸಲಾಯಿತು. ಕಂಪನಿಯಲ್ಲಿ ಅವರ ಉದ್ಯೋಗ ಪ್ರಾರಂಭವಾದ ಸ್ವಲ್ಪ ಸಮಯದ ನಂತರ, ಅವರು ತಮ್ಮ ಸ್ಥಾನಕ್ಕೆ ಬಡ್ತಿ ಪಡೆದ್ರು. ನಂತರ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಬಡ್ತಿ ಪಡೆದ್ರು.

ವಾಲ್ಟರ್ ಆರ್ಥಮನ್ ಏಪ್ರಿಲ್ 19, 2022 ರಂದು 100 ವರ್ಷಗಳನ್ನು ಪೂರೈಸಿದ್ದಾರೆ. ತಮ್ಮ ಜನ್ಮದಿನವನ್ನು ಅವರ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಿದ್ದಾರೆ. ಅವರು ಪ್ರತಿದಿನ ವ್ಯಾಯಾಮ ಮಾಡುತ್ತಾರೆ ಮತ್ತು ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...