ಸೇಬು ಹಣ್ಣಿನ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದರಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ. ದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಸೇಬು ಬಂಪರ್ ಇಳುವರಿಯನ್ನು ಹೊಂದಿದೆ. ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಉತ್ತರಾಖಂಡದಂತಹ ಗುಡ್ಡಗಾಡು ರಾಜ್ಯಗಳ ಆರ್ಥಿಕತೆಯ ಹೆಚ್ಚಿನ ಭಾಗವು ಸೇಬಿನ ಮೇಲೆ ಅವಲಂಬಿತವಾಗಿದೆ.
ಆದರೆ ಈ ಸೇಬು ಎಲ್ಲಕ್ಕಿಂತ ವಿಭಿನ್ನ. ಇದು ಕಪ್ಪು ಡೈಮಂಡ್ ಆಪಲ್. ಈ ಸೇಬನ್ನು ಬ್ಲ್ಯಾಕ್ ಡೈಮಂಡ್ ಎಂದು ಕರೆಯಲು ಕಾರಣವಿದೆ. ಈ ಸೇಬಿನ ಬಣ್ಣ ಕಪ್ಪು ಮತ್ತು ನೇರಳೆ. ಇದನ್ನು ಟಿಬೆಟ್‌ನಲ್ಲಿ ಬೆಳೆಯಲಾಗುತ್ತದೆ. ಟಿಬೆಟ್‌ನ ಬೆಟ್ಟಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ಇದನ್ನು ಬೆಳೆಸುವುದಿಲ್ಲ.
ಕಪ್ಪು ಸೇಬು ಹಣ್ಣನ್ನು ಟಿಬೆಟ್‌ನಲ್ಲಿ ನಿಯು ಎಂದೂ ಕರೆಯುತ್ತಾರೆ. ಟಿಬೆಟ್‌ನಲ್ಲಿ ಸೂರ್ಯನ ಕಿರಣಗಳು ನೇರವಾಗಿ ಬೆಳೆಗಳು ಮತ್ತು ಹಣ್ಣುಗಳ ಕೃಷಿಯ ಮೇಲೆ ಬೀಳುತ್ತವೆ. ನೇರ ಸೂರ್ಯನ ಬೆಳಕು ಮತ್ತು ನೇರಳಾತೀತ ಕಿರಣಗಳಿಂದಾಗಿ, ಈ ಸೇಬಿನ ಬಣ್ಣ ಕಪ್ಪು. ಈ ಕಪ್ಪು ಸೇಬು ಫಳ ಫಳನೆ ಹೊಳೆಯುತ್ತದೆ. ಇತರ ಸೇಬುಗಳಿಗೆ ಹೋಲಿಸಿದರೆ ಕಪ್ಪು ಡೈಮಂಡ್ ಆಪಲ್ ಸಿಕ್ಕಾಪಟ್ಟೆ ದುಬಾರಿ. ಆದರೆ ಕೆಂಪು ಸೇಬು ಇದಕ್ಕಿಂತ ಆರೋಗ್ಯಕರ. ಕಪ್ಪು ಸೇಬಿನ ಬೆಲೆ ಹೆಚ್ಚಾಗಿರುವುದಕ್ಕೆ ವಿಭಿನ್ನ ಬಣ್ಣವೇ ಕಾರಣ.
ಒಂದು ಕಪ್ಪು ಸೇಬು ಹಣ್ಣಿನ ಬೆಲೆ ಸುಮಾರು 500 ರೂಪಾಯಿ ಇದೆ. ಗಿಡಗಳನ್ನು ನೆಟ್ಟು 8 ವರ್ಷಗಳ ಬಳಿಕ ಮರದಲ್ಲಿ ಹಣ್ಣು ಬಿಡಲಾರಂಭಿಸುತ್ತದೆ. ಆದರೆ ಕೆಂಪು ಸೇಬು ಬೆಳೆಗೆ 4-5 ವರ್ಷಗಳು ಸಾಕು. 2015 ರಲ್ಲಿ ಟಿಬೆಟ್‌ನಲ್ಲಿ ಕಪ್ಪು ಸೇಬು ಕೃಷಿ ಪ್ರಾರಂಭವಾಯಿತು. ಮರದಿಂದ ಕಿತ್ತು ಎರಡು ತಿಂಗಳು ಮಾತ್ರ ಕಪ್ಪು ಸೇಬುಗಳನ್ನು ಇಡಬಹುದು. ಕಪ್ಪು ಸೇಬಿಗೆ ಪ್ರಪಂಚದಾದ್ಯಂತ ಬೇಡಿಕೆಯಿದೆ. ಟಿಬೆಟ್‌ನಲ್ಲಿ ಬೆಳೆದರೂ ಟಿಬೆಟಿಯನ್ನರು ಇದನ್ನು ತಿನ್ನುವುದಿಲ್ಲ, ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ.