ಬೇರೆ ಊರಿಗೆ ಹೋದಾಗ ಹೊಟೇಲ್ ನಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಕೆಲವೊಂದು ಹೊಟೇಲ್ ಗಳು ಆಕರ್ಷಕವಾಗಿರುತ್ತವೆ. ಮತ್ತೆ ಕೆಲ ಹೊಟೇಲ್ ಗಳು ಭಯ ಹುಟ್ಟಿಸುತ್ತವೆ. ಅಲ್ಲಿ ಹೋದಾಗ ಆದ ಕೆಟ್ಟ ಅನುಭವದಿಂದ ಹೊಟೇಲ್ ಸಹವಾಸ ಬೇಡ ಎನ್ನುವಂತಾಗುತ್ತದೆ.
ಬ್ರಿಟನ್ ನಲ್ಲಿ ಕೆಲ ಹೊಟೇಲ್ ಗಳು ಭಯ ಹುಟ್ಟಿಸುವಂತಿವೆ. ಬರ್ಕ್‌ಷೈರ್ ನಲ್ಲಿರುವ ಲಿಟಲ್‌ಕಾಟ್ ಹೌಸ್ ಹೊಟೇಲನ್ನು 1500 ರ ದಶಕದ ಆರಂಭದಲ್ಲಿ ನಿರ್ಮಿಸಲಾಯಿತು. ಈ ಹೋಟೆಲ್‌ನಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳ ದೆವ್ವಗಳಿವೆ ಎಂದು ಹೇಳಲಾಗುತ್ತದೆ. ಈ ಸ್ಥಳ ಇಂಗ್ಲೆಂಡ್‌ನ ಮೂರನೇ ಅತ್ಯಂತ ಭಯಾನಕ ಸ್ಥಳವಾಗಿದೆ.
ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಸೇರಿ ಇಬ್ಬರು ಅರೆಸ್ಟ್
ಹೋಟೆಲ್‌ನ ಮೆಟ್ಟಿಲುಗಳ ಮೇಲೆ ಕಪ್ಪು ನಾಯಿಯ ಪ್ರೇತವಿದೆಯಂತೆ. ಮಲಗುವ ಕೋಣೆಯ ಹೊರಗೆ ಮಹಿಳೆಯ ಪ್ರೇತವಿದೆಯಂತೆ. ಮಗುವೊಂದು ಆಗಾಗ ಓಡಾಡುತ್ತಿರುತ್ತದೆಯಂತೆ. ಇಲ್ಲಿ ರಾತ್ರಿ ಕಳೆಯುವುದು ಕಷ್ಟ. ಅಷ್ಟು ಧೈರ್ಯವಿರುವವರು ಇಲ್ಲಿ ಇನ್ನೊಂದಿಷ್ಟು ಭೂತಗಳ ಹುಡುಕಾಟ ನಡೆಸಬಹುದು.
ದಿ ಮರ್ಮೇಡ್ ಇನ್ ರೈ ಅತ್ಯಂತ ಭಯಾನಕವಾಗಿದೆ. ಕಟ್ಟಡವು 12 ನೇ ಶತಮಾನದಷ್ಟು ಹಿಂದಿನದು. ಕುಖ್ಯಾತ ಹಾಕ್ಹರ್ಸ್ಟ್ ಕಳ್ಳಸಾಗಣೆ ಗ್ಯಾಂಗ್ ಭದ್ರಕೋಟೆಯಾಗಿತ್ತು ಇದು. ಈಗ ಪ್ರೇತಗಳ ವಾಸಸ್ಥಾನವಾಗಿದೆ. ಇಲ್ಲಿ ಆರು ದೆವ್ವಗಳಿವೆಯಂತೆ. ಕುರ್ಚಿ ಸದ್ದು ಸೇರಿದಂತೆ ಇಲ್ಲಿ ಅನೇಕ ಸದ್ದುಗಳು ರಾತ್ರಿ ಕೇಳಿ ಬರುತ್ತವೆ.
ಬ್ರೂಕ್ ರೆಡ್ ಲಯನ್ ಹೋಟೆಲ್ ಕೂಡ ಭೂತಗಳ ವಾಸಸ್ತಾನ. ಇದು ಬ್ರಿಟನ್‌ನ ಅತ್ಯಂತ ಹಳೆಯ ನಗರ. ರಾತ್ರಿ ವೇಳೆ ಕೊಠಡಿಗಳು ಮತ್ತು ಕಾರಿಡಾರ್‌ಗಳಲ್ಲಿ ಮೂರು ದೆವ್ವಗಳು ಸುತ್ತಾಡುತ್ತವೆಯಂತೆ.