ಬೇಸಿಗೆಯಲ್ಲಿ ತೆಳುವಾದ ಹಾಗೂ ತೋಳಿಲ್ಲದ ಬಟ್ಟೆ ಧರಿಸಲು ಜನರು ಇಷ್ಟಪಡ್ತಾರೆ. ಬೇಸಿಗೆಯಲ್ಲಿ ವಾತಾವರಣ ಹಾಗೂ ಬಿಸಿಲಿನಿಂದಾಗಿ ಕೈ-ಕಾಲುಗಳು ಕಪ್ಪಗಾಗೋದು ಮಾಮೂಲಿ. ಮೊಣಕೈ ಕೂಡ ಕಪ್ಪಾಗೋದ್ರಿಂದ ಪಾರ್ಟಿಯಲ್ಲಿ ಅಥವಾ ಕಚೇರಿಯಲ್ಲಿ ಮುಜುಗರ ಅನುಭವಿಸಬೇಕಾಗುತ್ತದೆ.
ಡೆಡ್ ಸ್ಕಿನ್ ತೆಗೆದು ಮೊಣಕೈ ಬೆಳ್ಳಗೆ ಮಾಡಿಕೊಳ್ಳಲು ಸಾಕಷ್ಟು ಕಸರತ್ತು ಮಾಡ್ತಾರೆ ಹುಡುಗಿಯರು. ಆದ್ರೆ ಒಂದೇ ಒಂದು ಉಪಾಯದಿಂದ ಮೊಣಕೈ ಬೆಳ್ಳಗೆ ಮಾಡಿಕೊಳ್ಳಬಹುದು.
ಮೊಣಕೈ ಹೊಳಪು ನೀಡುವ ಮನೆ ಮದ್ದಿಗೆ ಬೇಕಾಗುವ ಸಾಮಗ್ರಿ :
2 ಚಮಚ ಜೇನುತಪ್ಪು
1 ಚಮಚ ಆಲಿವ್ ಆಯಿಲ್
½ ಚಮಚ ನಿಂಬು ರಸ
1 ಚಮಚ ಅಡುಗೆ ಸೋಡಾ
ಮಾಡುವ ವಿಧಾನ : ಜೇನುತುಪ್ಪ, ಆಲಿವ್ ಆಯಿಲ್, ನಿಂಬೆ ರಸ, ಅಡುಗೆ ಸೋಡಾವನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮೊಣಕೈ ಹಾಗೂ ಮೊಣಕಾಲುಗಳಿಗೆ ರಾತ್ರಿ ಹಚ್ಚಿಕೊಳ್ಳಿ. ಇದಕ್ಕೆ ಬಟ್ಟೆ ಕಟ್ಟಿ ರಾತ್ರಿ ಪೂರ್ತಿ ಇಡಿ. ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ, ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ತಿಂಗಳಿನಲ್ಲಿ ಮೂರು ಬಾರಿ ಈ ಮದ್ದು ಮಾಡಿ ಪರಿಣಾಮವನ್ನು ನೀವೇ ನೋಡಿ.