ಹಲ್ಲುಗಳನ್ನು ಶುಚಿಗೊಳಿಸುವುದು ಬಹಳ ಮುಖ್ಯ. ಬಹುತೇಕರು ಬ್ರಷ್ ಹಾಗೂ ಟೂತ್ ಪೇಸ್ಟ್ ಬಳಸಿ ಹಲ್ಲುಜ್ಜುವುದು ಸಾಮಾನ್ಯ. ನೀವು ಪ್ರತಿದಿನ ಸ್ನಾನ ಮಾಡದೇ ಇದ್ದರೂ ಹಲ್ಲು ಉಜ್ಜೋದನ್ನು ಮರೆಯಲೇಬಾರದು. ಅಕಸ್ಮಾತ್ ವ್ಯಕ್ತಿಯೊಬ್ಬ ಒಂದು ತಿಂಗಳು ಬ್ರಷ್ ಮಾಡದೇ ಇದ್ದರೆ ಏನಾಗುತ್ತದೆ ಅನ್ನೋದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಒಂದು ತಿಂಗಳು ಪೂರ್ತಿ ಬ್ರಷ್ ಮಾಡದಿದ್ದರೆ ಬಾಯಿಯಿಂದ ದುರ್ವಾಸನೆ ಬರಲು ಶುರುವಾಗುತ್ತದೆ. ಅಕ್ಕಪಕ್ಕದಲ್ಲಿ ಯಾರೂ ನಿಂತುಕೊಳ್ಳಲೂ ಸಾಧ್ಯವಾಗದಷ್ಟು ವಾಸನೆ ಬರಬಹುದು. ಜೊತೆಗೆ ಹಲ್ಲುಗಳಿಗೂ ಹಾನಿಯಾಗುತ್ತದೆ. ಬ್ರಷ್ ಮಾಡದೇ ಇರುವುದರಿಂದ ಹಲ್ಲುಗಳ ಮೇಲೆ ಕೊಳಕು ಸಂಗ್ರಹವಾಗುತ್ತದೆ. ಆಮೇಲೆ ನೀವೆಷ್ಟು ಬಾರಿ ಹಲ್ಲುಜ್ಜಿದರೂ ಅದನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ನಂತರ ದಂತವೈದ್ಯರ ಸಹಾಯ ಪಡೆಯಬೇಕಾಗಬಹುದು.
ಹಲ್ಲುಗಳ ಬಿಳಿ ಬಣ್ಣವೂ ಕಣ್ಮರೆಯಾಗುತ್ತದೆ. ಒಂದು ತಿಂಗಳು ಹಲ್ಲುಜ್ಜದೆ ಇದ್ದರೆ ಹಲ್ಲುಗಳಲ್ಲಿ ಬ್ಯಾಕ್ಟೀರಿಯಾದ ಶೇಖರಣೆಯಾಗುತ್ತದೆ. ಈಗಾಗಲೇ ಬಾಯಿಯಲ್ಲಿ ಸುಮಾರು 700 ವಿಧದ 60 ಲಕ್ಷ ಬ್ಯಾಕ್ಟೀರಿಯಾಗಳಿದ್ದು, ಹಲ್ಲುಜ್ಜದೇ ಇದ್ದರೆ ಅವುಗಳ ಸಂಖ್ಯೆ ಹಲವು ಪಟ್ಟು ಹೆಚ್ಚುತ್ತದೆ. ಈ ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿ ಕುಳಿಯನ್ನು ಉಂಟುಮಾಡುತ್ತವೆ. ನಿಮ್ಮ ಒಸಡುಗಳನ್ನೂ ದುರ್ಬಲಗೊಳಿಸುತ್ತವೆ.
ನಂತರ ಏನನ್ನೂ ಜಗಿಯಲು ಸಾಧ್ಯವಾಗುವುದಿಲ್ಲ. ಬ್ರಷ್ ಮಾಡದೇ ಇದ್ದರೆ ಪ್ರತಿ ದಿನ ಬ್ಯಾಕ್ಟೀರಿಯಾ ಮತ್ತು ರೋಗಗಳ ವಿರುದ್ಧ ಹೋರಾಡುವ ನಿಮ್ಮ ಹಲ್ಲುಗಳ ಶಕ್ತಿಯು ಕೊನೆಗೊಳ್ಳುತ್ತದೆ. ನಿಮ್ಮ ಹಲ್ಲುಗಳು ಬೇಗನೇ ಉದುರಲು ಪ್ರಾರಂಭಿಸುತ್ತವೆ. ಹಲ್ಲುಗಳು ಕೊಳೆತು ಒಡೆಯಲು ಪ್ರಾರಂಭಿಸುತ್ತವೆ. ಕೆಲವೇ ತಿಂಗಳುಗಳಲ್ಲಿ ನಿಮ್ಮ ಹಲ್ಲುಗಳೆಲ್ಲ ಉದುರಿ ಹೋಗಬಹುದು.