alex Certify ಒಂದು ತಿಂಗಳು ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ ಹೀಗಿರುತ್ತೆ ಅದರ ಪರಿಣಾಮ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ತಿಂಗಳು ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ ಹೀಗಿರುತ್ತೆ ಅದರ ಪರಿಣಾಮ….!

The coffee that's made without 'coffee beans' | The Times of India

ಪ್ರಪಂಚದಾದ್ಯಂತ  ಶತಕೋಟಿ ಜನರು ಬೆಳಗ್ಗೆ ಒಂದು ಕಪ್‌ ಚಹಾ ಅಥವಾ ಕಾಫಿ ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಬಿಸಿ ಪಾನೀಯಗಳ ಪ್ರಿಯರ ಕೊರತೆಯಿಲ್ಲ. ಕೆಲವರು  ದಿನಕ್ಕೆ ಹಲವಾರು ಬಾರಿ ಟೀ, ಕಾಫಿ ಸೇವಿಸುತ್ತಾರೆ. ಇದು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ ಮತ್ತು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಚಹಾ ಮತ್ತು ಕಾಫಿ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅದರಲ್ಲಿ ಕೆಫೀನ್ ಕಂಡುಬರುತ್ತದೆ.

ಇದು ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಪಾನೀಯವನ್ನು ತ್ಯಜಿಸುವುದು ಅಸಾಧ್ಯ ಎನ್ನುತ್ತಾರೆ ಹಲವರು. ಏಕೆಂದರೆ ಇದು ಚಟವಾಗಿ ಮಾರ್ಪಟ್ಟಿದೆ. ಒಬ್ಬ ವ್ಯಕ್ತಿಯು ಒಂದು ತಿಂಗಳ ಕಾಲ ಚಹಾ ಮತ್ತು ಕಾಫಿಯನ್ನು ತ್ಯಜಿಸಿದರೆ, ಅವನ ದೇಹದಲ್ಲಿ ಯಾವ ಬದಲಾವಣೆಗಳು ಬರಬಹುದು ಎಂಬುದನ್ನು ನೋಡೋಣ.

ರಕ್ತದೊತ್ತಡದ ನಿಯಂತ್ರಣ- ಚಹಾ ಮತ್ತು ಕಾಫಿ ನಮಗೆ ಆಯಾಸದಿಂದ ಪರಿಹಾರವನ್ನು ನೀಡುತ್ತದೆ, ಆದರೆ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಈ ಪಾನೀಯಗಳಲ್ಲಿ ಕೆಫೀನ್ ಅಂಶವಿರುವುದರಿಂದ ಒಂದು ತಿಂಗಳ ಕಾಲ ಟೀ, ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಅಧಿಕ ಬಿಪಿ ಸಮಸ್ಯೆ ನಿವಾರಣೆಯಾಗುತ್ತದೆ.

ಪ್ರಶಾಂತವಾದ ನಿದ್ರೆ – ಚಹಾವನ್ನು ಬಿಡುವುದು ನಿದ್ರೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ನಾವೆಲ್ಲ ಎಷ್ಟು ನಿರಾತಂಕವಾಗಿ ನಿದ್ದೆ ಮಾಡುತ್ತಿದ್ದೆವು. ಆದರೆ ವಯಸ್ಸು ಹೆಚ್ಚಾದಂತೆ ಚಹಾ ಮತ್ತು ಕಾಫಿ ಕುಡಿಯಲಾರಂಭಿಸುತ್ತೇವೆ. ಇದರ ಪರಿಣಾಮ ನಿದ್ದೆಯ ಮೇಲಾಗುತ್ತದೆ. ಕೆಫೀನ್ ಭರಿತ ಪಾನೀಯಗಳನ್ನು ತ್ಯಜಿಸಿದ ಒಂದು ವಾರದೊಳಗೆ ನಿದ್ರೆಯಲ್ಲಿ ಅದ್ಭುತವಾದ ಸುಧಾರಣೆಯನ್ನು ಕಾಣಬಹುದು. ಒಂದು ತಿಂಗಳಲ್ಲಿ ದೊಡ್ಡ ವ್ಯತ್ಯಾಸವೇ ನಮ್ಮ ಮುಂದಿರುತ್ತದೆ. ಕೆಫೀನ್ ನಮ್ಮ ನ್ಯೂರಾನ್‌ಗಳನ್ನು ಸಕ್ರಿಯಗೊಳಿಸುವುದರಿಂದ, ಚಹಾ ಮತ್ತು ಕಾಫಿ ಕುಡಿಯುವುದರಿಂದ ನಮಗೆ ನಿದ್ರೆ ಬರುವುದಿಲ್ಲ.

ಹಲ್ಲುಗಳಲ್ಲಿ ಬಿಳುಪುಚಹಾ ಮತ್ತು ಕಾಫಿಯಂತಹ ಬಿಸಿ ಪದಾರ್ಥಗಳು ನಮ್ಮ ಹಲ್ಲುಗಳಿಗೆ ತುಂಬಾ ಹಾನಿಕಾರಕವಾಗಿದೆ. ಟೀ-ಕಾಫಿ ಕುಡಿದರೆ ಹಲ್ಲುಗಳ ಬಣ್ಣ ಬದಲಾಗುತ್ತದೆ. ಈ ಪಾನೀಯ ಅವುಗಳನ್ನು ದುರ್ಬಲಗೊಳಿಸುತ್ತದೆ. ಒಂದು ತಿಂಗಳು ಚಹಾ ಮತ್ತು ಕಾಫಿ ಕುಡಿಯುವುದನ್ನು ನಿಲ್ಲಿಸಿದರೆ ಹಲ್ಲುಗಳಲ್ಲಿ ಹೊಸ ಬಿಳುಪು ಬರಲು ಪ್ರಾರಂಭಿಸುತ್ತದೆ. ಟೀ-ಕಾಫಿ ಸ್ವಲ್ಪ ಆಮ್ಲೀಯವಾಗಿದ್ದು ಇದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ. ಕೀರಲು ಧ್ವನಿಗೂ ಸಹ ಇದು ಕಾರಣವಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...