
ಕಲ್ಲುಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಹಾಗಾಗಿ ಒಂದು ಚಮಚ ಕಲ್ಲುಪ್ಪನ್ನು ಬಳಸಿ ಯಾವೆಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.
*ಸೊಳ್ಳೆ ಅಥವಾ ಕೀಟ ಕಡಿತದಿಂದ ತುರಿಕೆ ಉಂಟಾಗಿದ್ದರೆ ಅದನ್ನು ನಿವಾರಿಸಲು ಕಲ್ಲುಪ್ಪನ್ನು ನೀರಿನಲ್ಲಿ ಬೆರೆಸಿ ಪೀಡಿತ ಪ್ರದೇಶಕ್ಕೆ ಹಚ್ಚಿ.
*ಮಲಬದ್ಧತೆ ಸಮಸ್ಯೆ ಅನುಭವಿಸುತ್ತಿದ್ದರೆ ಅದರಿಂದ ಪರಿಹಾರ ಪಡೆಯಲು ನಾಲ್ಕು ಕಾಳು ಉಪ್ಪನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.
*ಕಲ್ಲುಪ್ಪಿನಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ದೇಹದ ನೋವನ್ನು ನಿವಾರಿಸಲು ನೀರಿಗೆ 1 ಚಮಚ ಕಲ್ಲುಪ್ಪನ್ನು ಮಿಕ್ಸ್ ಮಾಡಿ ಸ್ನಾನ ಮಾಡಿ.
*ಪಾದದ ದಣಿವನ್ನು ನಿವಾರಿಸಲು ಕಲ್ಲುಪ್ಪು ಮಿಕ್ಸ್ ಮಾಡಿದ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಹೊತ್ತು ನೆನೆಸಿಡಿ.