ದೇಶದ ಮೂರು ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಪೈಪೋಟಿಗೆ ಬಿದ್ದಿವೆ. ಅತ್ಯುತ್ತಮ ಆಫರ್ ಮೂಲಕ ಗ್ರಾಹಕರನ್ನು ಸೆಳೆದುಕೊಳ್ಳಲು ಕಸರತ್ತು ಮಾಡ್ತಿವೆ. ಇದೀಗ ಈ ಮೂರೂ ಕಂಪನಿಗಳು 479 ರೂಪಾಯಿಯ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಗ್ರಾಹಕರಿಗಾಗಿಯೇ ಬಿಡುಗಡೆ ಮಾಡಿವೆ. ಇದರಲ್ಲಿ ಬೆಸ್ಟ್ ಯಾವುದು ಅನ್ನೋದನ್ನು ಬಳಕೆದಾರರು ನಿರ್ಧರಿಸಬೇಕಿದೆ.
ರಿಲಯನ್ಸ್ ಜಿಯೋದ 479 ರೂಪಾಯಿ ಪ್ರಿಯೇಯ್ಡ್ ಪ್ಲಾನ್‌ನಲ್ಲಿ 56 ದಿನಗಳ ಮಾನ್ಯತೆ ಸಿಗುತ್ತದೆ. 1.5GB ದೈನಂದಿನ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತದೆ, ಅಂದರೆ ಈ ಯೋಜನೆಯಲ್ಲಿ ನೀವು ಒಟ್ಟಾರೆಯಾಗಿ 84GB ಡೇಟಾವನ್ನು ಪಡೆಯುತ್ತೀರಿ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS ಸೌಲಭ್ಯಗಳಿವೆ. ಇದರ ಜೊತೆಗೆ ಜಿಯೋ ಟಿವಿ ಮತ್ತು ಜಿಯೋ ಸಿನಿಮಾ ಅಪ್ಲಿಕೇಶನ್‌ಗೆ ಫ್ರೀ ಪ್ರವೇಶ ಸಿಗುತ್ತದೆ.
ಏರ್‌ಟೆಲ್ ಕೂಡ ತನ್ನ 479 ರೂಪಾಯಿ ಪ್ಲಾನ್‌ನಲ್ಲಿ Jio ನಂತೆ ಬಳಕೆದಾರರಿಗೆ 1.5GB ದೈನಂದಿನ ಡೇಟಾವನ್ನು ನೀಡುತ್ತಿದೆ. ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ದಿನಕ್ಕೆ 100 SMS ಸೌಲಭ್ಯ ಇದರಲ್ಲೂ ಇದೆ. ಜೊತೆಗೆ 56 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಇದಲ್ಲದೆ ಈ ಯೋಜನೆಯಲ್ಲಿ ಫಾಸ್ಟ್‌ಟ್ಯಾಗ್‌ನಲ್ಲಿ 100 ರೂಪಾಯಿ ಕ್ಯಾಶ್‌ಬ್ಯಾಕ್ ಮತ್ತು ವಿಂಕ್ ಮ್ಯೂಸಿಕ್ ಅಪ್ಲಿಕೇಶನ್, ಹಲೋ ಟ್ಯೂನ್ಸ್ ಮತ್ತು ಅಪೊಲೊಗೆ ಉಚಿತ ಪ್ರವೇಶವನ್ನು ನೀಡಲಾಗಿದೆ.
ಇನ್ನು ವೊಡಾಫೋನ್ ಐಡಿಯಾ Viನಲ್ಲೂ 479 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಇದ್ದು, 56 ದಿನಗಳ ವ್ಯಾಲಿಡಿಟಿ ಸಿಗಲಿದೆ. ದಿನಕ್ಕೆ 100 SMS, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು 1.5GB ದೈನಂದಿನ ಡೇಟಾವನ್ನು ನೀಡಲಾಗುತ್ತಿದೆ. ನೀವು ಮಧ್ಯಾಹ್ನ 12 ರಿಂದ ಬೆಳಿಗ್ಗೆ 6 ರವರೆಗೆ ಅನಿಯಮಿತ ಉಚಿತ ಇಂಟರ್ನೆಟ್ ಸೌಲಭ್ಯವನ್ನು ಆನಂದಿಸಬಹುದು. ಈ ಯೋಜನೆಯು ಕಂಪನಿಯ ವಾರಾಂತ್ಯದ ಡೇಟಾ ರೋಲ್‌ಓವರ್ ಮತ್ತು ತಿಂಗಳಿಗೆ 2GB ಬ್ಯಾಕಪ್ ಡೇಟಾದ ಪ್ರಯೋಜನಗಳೊಂದಿಗೆ ಬರುತ್ತದೆ.
ಈ ಮೂರು ಕಂಪನಿಗಳ 479 ಪ್ಲಾನ್‌ನಲ್ಲಿ ಬೆಸ್ಟ್ ಯಾವುದು ಅನ್ನೋದನ್ನು ನೀವೇ ನಿರ್ಧರಿಸಿ. ನಿಮಗ್ಯಾವುದು ಸೂಕ್ತವೆನಿಸುತ್ತದೆಯೋ ಅದನ್ನೇ ರೀಚಾರ್ಜ್ ಮಾಡಿಕೊಳ್ಳಬಹುದು.