ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 ಲಕ್ಷ ರೂಪಾಯಿ ಪಾವತಿಸಬೇಕಾಗಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಭಾಸ್ಕರ್ ಜಾಧವ್ ಅವ್ರ ಕುಟುಂಬಕ್ಕೆ ಆರು ವರ್ಷಗಳ ಹಿಂದೆ ರೆಸ್ಟೋರೆಂಟ್ 165 ರೂಪಾಯಿ ಬೆಲೆಯ ಐಸ್ ಕ್ರೀಮನ್ನು 175 ರೂಪಾಯಿಗೆ ಮಾರಾಟ ಮಾಡಿತ್ತು. ಇದನ್ನು ಪ್ರಶ್ನಿಸಿ ದಕ್ಷಿಣ ಮುಂಬೈ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಗ್ರಾಹಕರ ವೇದಿಕೆ ರೆಸ್ಟೋರೆಂಟ್ ಗೆ ದಂಡ ವಿಧಿಸಿದೆ. ರೆಸ್ಟೋರೆಂಟ್ ನಿಂದ ಜಾಧವ್ ಯಾವುದೇ ಸೇವೆ ಪಡೆದಿರಲಿಲ್ಲ. ಐಸ್ ಕ್ರೀಂ ಪಾರ್ಸಲ್ ತೆಗೆದುಕೊಂಡು ಹೋಗಿದ್ದರು. ಹಾಗಾಗಿ ರೆಸ್ಟೋರೆಂಟ್ ಹೆಚ್ಚುವರಿ ಶುಲ್ಕ ಪಾವತಿಸಿದ್ದು ತಪ್ಪೆಂದು ಗ್ರಾಹಕರ ವೇದಿಕೆ ಹೇಳಿದೆ.