
ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು ಕಾಂತಿಯುಕ್ತವಾಗುತ್ತದೆ. ಹಾಗೂ ನಯವಾಗಿ, ತಂಪಾಗಿರುತ್ತದೆ.
ಹಾಗಾದರೆ ತ್ವಚೆ ಹೊಳೆಯಲು ಹಾಗೂ ಮುಖದ ಚರ್ಮದ ಸಮಸ್ಯೆ ನಿವಾರಿಸಿಕೊಳ್ಳಲು ಐಸ್ ಕ್ಯೂಬ್ ಗಳನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು? ಅದಕ್ಕೆ ಇಲ್ಲಿದೆ ಮಾಹಿತಿ…
* ಐಸ್ ಕ್ಯೂಬ್ ಗಳನ್ನು ಬಳಕೆ ಮಾಡುವ ವೇಳೆ ನೇರವಾಗಿ ಮುಖಕ್ಕೆ ಹಚ್ಚಬಾರದು. ಬಿಳಿ ಹಾಗೂ ಸ್ವಚ್ಛವಾದ ಬಟ್ಟೆಯಲ್ಲಿ ಹಾಕಿಕೊಂಡು ನಯವಾಗಿ ಮುಖಕ್ಕೆ ಮಸಾಜ್ ಮಾಡಿಕೊಳ್ಳಬೇಕು.
ನೇರವಾಗಿ ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ಮುಖದ ಚರ್ಮ ಒಡೆಯುವ ಸಾಧ್ಯತೆಗಳಿರುತ್ತವೆ.
* ಬೇಸಿಗೆಯಲ್ಲಿ ಫೌಂಡೇಶನ್ ಬಳಕೆ ಮಾಡುವುದಕ್ಕೂ ಮುನ್ನ ಶುದ್ಧ ಹಾಗೂ ಕಾಟನ್ ಬಟ್ಟೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಾಕಿ ಮಸಾಜ್ ಮಾಡಿಕೊಂಡು ನಂತರ ಫೌಂಡೇಶನ್ ಹಚ್ಚಿಕೊಳ್ಳಬೇಕು. ಇದರಿಂದ ಚರ್ಮದ ಮೇಲಿನ ರಂಧ್ರಗಳು ಮುಚ್ಚಿಕೊಳ್ಳಲು ಸಹಾಯವಾಗುತ್ತದೆ.
* ಮೊಡವೆ ಸಮಸ್ಯೆ ಎದುರಿಸುತ್ತಿರುವವರೂ ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ಸಮಸ್ಯೆ ನಿವಾರಣೆಯಾಗುತ್ತವೆ. ಗುಳ್ಳೆಗಳು ಒಡೆದು ಕೆಂಪಾಗಿ ಕಾಣಲು ಆರಂಭಿಸಿದರೆ, ಅವುಗಳೂ ಮಾಯವಾಗುತ್ತವೆ.
* ಶುದ್ಧವಾದ ಬಟ್ಟೆಯ ಮೇಲೆ ಐಸ್ ಕ್ಯೂಬ್ ಗಳನ್ನು ಹಾಕಿ ಕಣ್ಣಿನ ಮೇಲೆ ಕೆಲ ಸೆಕೆಂಡ್ ಗಳ ಕಾಲ ಮಸಾಜ್ ಮಾಡುವುದರಿಂದ ಊದಿದ ಕಣ್ಣುಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ.
* ಕಣ್ಣುಗಳ ಸುತ್ತಲಿನ ಚರ್ಮ ಸೂಕ್ಷ್ಮವಾಗಿರುವ ಕಾರಣ ವ್ಯಾಕ್ಸ್ ಮಾಡಿಸಿದಾಗ ಅಥವಾ ಐಬ್ರೋ ಮಾಡಿಸಿದ ಸಂದರ್ಭದಲ್ಲಿ ಕೆಲ ನಿಮಿಷಗಳ ಕಾಲ ಸುದೀರ್ಘವಾಗಿ ಐಸ್ ಕ್ಯೂಬ್ ಗಳಿಂದ ಮಸಾಜ್ ಮಾಡಬೇಕು.
* ದಿನ ನಿತ್ಯ ಎರಡು ಬಾರಿ 20 ನಿಮಿಷಗಳ ಕಾಲ ಐಸ್ ಕ್ಯೂಬ್ ಗಳಿಂದ ಮುಖವನ್ನು ಮಸಾಜ್ ಮಾಡಿ ತೊಳೆದುಕೊಂಡರೆ ಮುಖ ಹೊಳೆಯುತ್ತದೆ.
* ಒಣಗಿದ ಚರ್ಮ ಹೊಂದಿದ್ದವರು, 2-3 ಬಾದಾಮಿಗಳನ್ನು ಪೇಸ್ಟ್ ಮಾಡಿಕೊಂಡು ಅದನ್ನು ಐಸ್ ಕ್ಯೂಬ್ ಗಳನ್ನಾಗಿ ತಯಾರಿಸಿಕೊಳ್ಳಬೇಕು. ಇದರಿಂದ ಮುಖಕ್ಕೆ ಮಸಾಜ್ ಮಾಡಿದರೆ, ಚರ್ಮದ ಆರೋಗ್ಯ ಹೆಚ್ಚುತ್ತದೆ.
* ಎಣ್ಣೆಯ ತ್ವಚೆ ಹೊಂದಿದ್ದವರು ಐಸ್ ಕ್ಯೂಬ್ ಮಾಡಿಕೊಳ್ಳುವಾಗ ಸ್ವಲ್ಪ ನಿಂಬೆ ಹಣ್ಣಿನ ರಸ ಸೇರಿಸಿ ಐಸ್ ಕ್ಯೂಬ್ ಗಳನ್ನು ಮಸಾಜ್ ಮಾಡಿ ಉತ್ತಮವಾಗಿರುತ್ತದೆ.
* ತೋಳುಗಳಲ್ಲಿ ಹೆಚ್ಚು ಬೆವರು ಬರುವವರೂ ಕೂಡ ನಿಂಬೆ ಹಣ್ಣಿನ ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ಬೆವರು ಕಡಿಮೆಯಾಗುತ್ತದೆ.
* ಚರ್ಮ ಸೂರ್ಯನ ಕಾಂತಿಗೆ ಸುಟ್ಟು ಹೋಗಿದ್ದರೆ ಅಥವಾ ಒಡೆದಿದ್ದರೆ ಅಲೋವೆರಾ ರಸವನ್ನು ಐಸ್ ಕ್ಯೂಬ್ ಗಳನ್ನಾಗಿ ಮಾಡಿಕೊಂಡು ಚರ್ಮಕ್ಕೆ ಮಸಾಜ್ ಮಾಡಿಕೊಳ್ಳಬಹುದು.
* ಅಲೋವೆರಾ ರಸದ ಐಸ್ ಕ್ಯೂಬ್ ತೆಗೆದುಕೊಂಡು ಮೊಳಕೈ, ಕುತ್ತಿಗೆ ಭಾಗದಲ್ಲಿ 15-20 ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ಕಪ್ಪು ಚರ್ಮ ಸಮಸ್ಯೆ ನಿವಾರಣೆಯಾಗುತ್ತದೆ.