ಐಸ್‌ಕ್ರೀಂ ಜಾಹೀರಾತೊಂದು ಇರಾನ್‌ನಲ್ಲಿ ವಿವಾದ ಸೃಷ್ಟಿಸಿದೆ. ಸಡಿಲವಾದ ಹಿಜಾಬ್ ಧರಿಸಿರುವ ಮಹಿಳೆಯೊಬ್ಬಳು ಮ್ಯಾಗ್ನಮ್ ಐಸ್‌ಕ್ರೀ ಸವಿಯುತ್ತಿರುವ ದೃಶ್ಯ ಈ ಜಾಹೀರಾತಿನಲ್ಲಿದೆ. ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಇದೀಗ ಯಾವುದೇ ಜಾಹೀರಾತಿನಲ್ಲಿ ಮಹಿಳೆಯರು ಇರುವಂತಿಲ್ಲ ಎಂಬ ಹೊಸ ಆದೇಶ ಹೊರಡಿಸಿದೆ. ಇರಾನಿಯನ್ ಮ್ಯಾಗ್ನಮ್ ಐಸ್‌ಕ್ರೀಂನ ಈ ಜಾಹೀರಾತು ಇರಾನ್ ಧರ್ಮಗುರುಗಳನ್ನು ಕೆರಳಿಸಿದೆಯಂತೆ.
ವಿವಾದಾತ್ಮಕ ಜಾಹೀರಾತನ್ನು ತೋರಿಸಿದ ಸ್ಥಳೀಯ ಐಸ್ ಕ್ರೀಮ್ ತಯಾರಕ ಡೊಮಿನೊ ವಿರುದ್ಧ ಮೊಕದ್ದಮೆ ಹೂಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಐಸ್ ಕ್ರೀಮ್ ಜಾಹೀರಾತು ಮಹಿಳಾ ಮೌಲ್ಯಗಳಿಗೆ ಅವಮಾನ ಮಾಡಿದೆ, ಸಾರ್ವಜನಿಕ ಸಭ್ಯತೆಗೆ ಇದು ವಿರುದ್ಧ ಎಂಬುದು ಅವರ ಆರೋಪ. ಇದಕ್ಕೆ ಇರಾನ್‌ನ ಸಚಿವಾಲಯ ಸಹ ತಲೆದೂಗಿದೆ. ಪರಿಶುದ್ಧತೆಯ ನಿಯಮಗಳನ್ನು ಉಲ್ಲೇಖಿಸಿರುವ ಸಚಿವಾಲಯ ಮಹಿಳೆಯರಿಗೆ ಇನ್ನು ಮುಂದೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ.
https://twitter.com/IranIntl_En/status/1544238827874750465?ref_src=twsrc%5Etfw%7Ctwcamp%5Etweetembed%7Ctwterm%5E1544238827874750465%7Ctwgr%5E264ae53ca5135b703caec6b66be904d9ea87d574%7Ctwcon%5Es1_&ref_url=https%3A%2F%2Fzeenews.india.com%2Finternational-business%2Fwomen-cant-appear-in-advertisements-iran-issues-ban-after-controversial-and-vulgar-ice-cream-commercial-watch-2493554.html