ಈ ವರ್ಷದ ಐಸಿಸಿ ಟೆಸ್ಟ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಆರ್. ಅಶ್ವಿನ್ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ, ಅಳೆದು ತೂಗಿ ನೋಡಿ ಈ ಬಾರಿ ಇಂಗ್ಲೆಂಡ್ ನ ನಾಯಕ ಜೋ ರೂಟ್ ಆಯ್ಕೆಯಾಗಿದ್ದಾರೆ.
ಜೋ ರೂಟ್ ಕೂಡ ಈ ವರ್ಷ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಈ ನಿಟ್ಟಿನಲ್ಲಿ ಪ್ರಶಸ್ತಿ ಕೂಡ ಅವರಿಗೆ ಸಂದಿದೆ. ಇನ್ನಿತರ ರಾಷ್ಟ್ರಗಳ ಘಟಾನುಘಟಿ ಆಟಗಾರರ ಎದುರೇ ಜೋ ರೂಟ್ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದರು.
ಅಲ್ಲದೇ, ಕೊನೆಗೆ ಬೆಸ್ಟ್ ಆಫ್ ದಿ ಬೆಸ್ಟ್ ಆಟಗಾರ ಎಂದು ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಐಸಿಸಿ ವರ್ಷದ ಆಟಗಾರರ ಅಂತಿಮ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಅಂತಿಮ ಪಟ್ಟಿಯಲ್ಲಿದ್ದರು. ಭಾರತದ ಆರ್. ಅಶ್ವಿನ್, ನ್ಯೂಜಿಲೆಂಡ್ ನ ಆಲ್ ರೌಂಡರ್ ಕೈಲ್ ಜೇಮಿಸನ್, ಶ್ರೀಲಂಕಾದ ದಿಮುತ್ ಕರುಣರತ್ನೆ ಈ ಪಟ್ಟಿಯಲ್ಲಿದ್ದರು. ಕೊನೆಗೆ ಇವರೆನ್ನೆಲ್ಲ ಹಿಂದಿಕ್ಕಿ ಇಂಗ್ಲೆಂಡ್ ನ ಜೋ ರೂಟ್ ಪ್ರಶಸ್ತಿ ಪಡೆದಿದ್ದಾರೆ.
2021ರಲ್ಲಿ ಜೋ ರೂಟ್ ಒಟ್ಟು 15 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಬರೋಬ್ಬರಿ 6 ಶತಕಗಳನ್ನು ಸಿಡಿಸಿದ್ದರು. ಅಲ್ಲದೇ, 1708 ರನ್ ಗಳನ್ನು ಗಳಿಸಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಈ ವರ್ಷ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.
ಬ್ಯಾಟಿಂಗ್ ನೊಂದಿಗೆ ಬೌಲಿಂಗ್ ನಲ್ಲಿಯೂ ಈ ಬಾರಿ ಇವರು ಮಿಂಚಿದ್ದರು. ಈ ಸಂದರ್ಭದಲ್ಲಿ 15 ವಿಕೆಟ್ ಗಳನ್ನು ಕೂಡ ಕಿತ್ತಿದ್ದರು. ಹೀಗಾಗಿ ಇವರೇ ಟೆಸ್ಟ್ ಕ್ರಿಕೆಟ್ ನ ಐಸಿಸಿ ಆಟಗಾರ ಎಂದು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.