
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದ ಘಟನೆ ಶ್ರೀರಂಗಪಟ್ಟಣ ಬಳಿಯ ಗಂಜಾಂನ ನಿಮಿಷಾಂಬ – ಕರಿಘಟ್ಟ ಸೇತುವೆಯ ಬಳಿ ನಡೆದಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಿವಾಸಿ ರೂಪೇಶ್ ಎಂಬವರು ಈ ಕೃತ್ಯ ಎಸಗಿದ್ದು, ಇವರ ತಾಯಿ ಇತ್ತೀಚೆಗೆ ನಿಧನರಾಗಿದ್ದ ಕಾರಣ ರೂಪೇಶ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.
ಗುರುವಾರದಂದು ಹರಸಾಹಸಪಟ್ಟು ಪೊಲೀಸರು ಬಿಎಂಡಬ್ಲ್ಯೂ ಕಾರ್ ಅನ್ನು ಹೊರಗೆ ತೆಗೆದಿದ್ದು, ವಿಚಾರಣೆ ವೇಳೆ ರೂಪೇಶ್ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಬಳಿಕ ಅವರ ಸಂಬಂಧಿಗಳನ್ನು ಶ್ರೀರಂಗಪಟ್ಟಣಕ್ಕೆ ಕರೆಯಿಸಿ ವಿಚಾರಿಸಿದಾಗ ರೂಪೇಶ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ವಿಷಯ ತಿಳಿದುಬಂದಿದೆ.