ಆಪಲ್ ಕಂಪನಿ ಐಫೋನ್ 15 ಅನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಐಫೋನ್ 15 ಮಾರುಕಟ್ಟೆಗೆ ಬಂದ ನಂತರ ಗೂಗಲ್ ಕೂಡ ಹೊಸ ಫೋನ್ ಅನ್ನು ಲಾಂಚ್ ಮಾಡಲು ಸಿದ್ಧತೆ ಮಾಡಿಕೊಳ್ತಿದೆ. ಅಕ್ಟೋಬರ್‌ನಲ್ಲಿ ಗೂಗಲ್ ಪಿಕ್ಸೆಲ್ 8 ಬಿಡುಗಡೆಯಾಗುವ ಸಾಧ್ಯತೆ ಇದೆ. ನಿಖರವಾದ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಖಚಿತಪಡಿಸಿಲ್ಲ. ಆದರೆ ಫೋನ್‌ನ ಫೀಚರ್ಸ್ ಹಾಗೂ ಬೆಲೆಗಳ ವಿವರ ಸೋರಿಕೆಯಾಗಿವೆ.
Google Pixel 8 Pro OIS ನೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿರಲಿದೆ. ಇದಲ್ಲದೆ 64-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಟೆಲಿಫೋಟೋ ಲೆನ್ಸ್‌ನೊಂದಿಗೆ 48-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ. ಮೂಲಗಳ ಪ್ರಕಾರ ಗೂಗಲ್ ಪಿಕ್ಸೆಲ್ 8 ಪ್ರೋ 6.7-ಇಂಚಿನ QHD, LTPO OLED ಡಿಸ್‌ಪ್ಲೇಯನ್ನು ಹೊಂದಿರುತ್ತದೆ. ಅದು 120 Hz ನಲ್ಲಿ ರಿಫ್ರೆಶ್ ಆಗುತ್ತದೆ.
ವಿಡಿಯೋ ವೀಕ್ಷಣೆ ಹಾಗೂ ವಿಡಿಯೋ ಗೇಮ್‌ಗಳನ್ನು ಆಡಲು ಹೇಳಿಮಾಡಿಸಿದಂತಹ ಸ್ಕ್ರೀನ್ ಇದು. ಫೋನ್ Googleನ ನೆಕ್ಸ್ಟ್ ಜೆನ್ ಟೆನ್ಸರ್ G3 ಚಿಪ್‌ಸೆಟ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದು ಎಲ್ಲಾ ರೀತಿಯ ಕಾರ್ಯಗಳನ್ನು ಸುಲಭವಾಗಿ ನಿಭಾಯಿಸಬಲ್ಲ ಅತ್ಯಂತ ಶಕ್ತಿಶಾಲಿ ಪ್ರೊಸೆಸರ್. Pixel 8 Pro ಎರಡು ಸ್ಟೋರೇಜ್ ಆಯ್ಕೆಗಳನ್ನು ಹೊಂದಿರಲಿದೆ. ಒಂದು 12GB RAM ಮತ್ತು 128 GB ಸ್ಟೋರೇಜ್ ಮತ್ತು ಇನ್ನೊಂದು 12GB RAM ಮತ್ತು 256GB ಸ್ಟೋರೇಜ್. ಬಳಕೆದಾರರು ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.
ಗೂಗಲ್ ಪಿಕ್ಸೆಲ್ 8 ಪ್ರೊ ಪ್ರಬಲ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿರುತ್ತದೆ. ಫೋನ್ OIS ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 64-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಟೆಲಿಫೋಟೋ ಲೆನ್ಸ್‌ನೊಂದಿಗೆ 48-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುತ್ತದೆ. ಮುಂಭಾಗದ ಕ್ಯಾಮೆರಾ 11 ಮೆಗಾಪಿಕ್ಸೆಲ್ ಎಂದು ಹೇಳಲಾಗ್ತಿದೆ. ಕ್ಯಾಮೆರಾ ವ್ಯವಸ್ಥೆಯು Google ನ AI- ಆಧಾರಿತ ಕ್ಯಾಮೆರಾ ಸಾಫ್ಟ್‌ವೇರ್‌ನಿಂದ ಬೆಂಬಲಿತವಾಗಿದೆ. ಇದರಲ್ಲಿ ಹೈ ಕ್ವಾಲಿಟಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯಬಹುದು.
ಗೂಗಲ್ ಪಿಕ್ಸೆಲ್ 8 ಪ್ರೊ ವೇಗವಾಗಿ ಚಾರ್ಜ್ ಆಗಬಲ್ಲ 4,950mAh ಬ್ಯಾಟರಿಯನ್ನು ಹೊಂದಿರುತ್ತದೆ. ಗೂಗಲ್ ಪಿಕ್ಸೆಲ್ 8 ಬೆಲೆ 60,000 ರೂಪಾಯಿಗಿಂತ ಹೆಚ್ಚಿರಬಹುದು. ಗೂಗಲ್ ಪಿಕ್ಸೆಲ್ 8 ಬೆಲೆ 649 ಡಾಲರ್ (ಅಂದಾಜು ರೂ. 53,450) ಎಂದು ಹೇಳಲಾಗ್ತಿದೆ. ಅಥವಾ ಇದು 699 ಡಾಲರ್ ಕೂಡ ಆಗಿರಬಹುದು (ಸುಮಾರು ರೂ. 57,570). ಭಾರತದಲ್ಲಿ ರೂ.60,000 ಕ್ಕಿಂತ ಹೆಚ್ಚು ಬೆಲೆಗೆ ಬಿಡುಗಡೆಯಾಗಬಹುದು. ಗೂಗಲ್ ಪಿಕ್ಸೆಲ್ 8 ಪ್ರೊ ಬೆಲೆಯ ಬಗ್ಗೆ ಮಾಹಿತಿ ಲಭ್ಯವಿಲ್ಲ.