ಐಫೋನ್ ಬಳಸೋದು ಒಂದು ರೀತಿ ಪ್ರತಿಷ್ಠೆಯಾಗಿ ಬದಲಾಗಿದೆ. ಅದರ ಗುಣಮಟ್ಟ ಕೂಡ ಗ್ರಾಹಕರನ್ನು ಆಕರ್ಷಿಸುತ್ತದೆ. ಆಪಲ್ ಕಂಪನಿ ಪ್ರತಿವರ್ಷ ಹೊಸ ಮಾದರಿಯ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತದೆ. ಈ ಬಾರಿ ಕೂಡ ಸೆಪ್ಟೆಂಬರ್ ನಲ್ಲಿ ಹೊಸ ಮಾದರಿಯ ಫೋನ್ ಮಾರುಕಟ್ಟೆಗೆ ಬರಬಹುದು. ಸದ್ಯ ಲೇಟೆಸ್ಟ್ ಮಾಡೆಲ್ ಐಫೋನ್ 13 ಎಲ್ಲರನ್ನೂ ಆಕರ್ಷಿಸ್ತಾ ಇದೆ.
ವಿಶೇಷ ಅಂದ್ರೆ ಐಫೋನ್ 13ರನ್ನು ಫ್ರೀಯಾಗಿ ಪಡೆಯಲು ನಿಮಗೊಂದು ಅವಕಾಶವಿದೆ. ಐಫೋನ್ 13 ಬೆಲೆ 79,900 ರೂಪಾಯಿ. ಇದನ್ನು ಉಚಿತವಾಗಿ ಪಡೆಯಬೇಕು ಅಂದ್ರೆ ನೀವು ಪೇಟಿಎಂ ಅಪ್ಲಿಕೇಶನ್ ಅನ್ನು ಹೊಂದಿರಬೇಕು. ಯಾಕಂದ್ರೆ ಪೇಟಿಎಂ ತನ್ನ ಗ್ರಾಹಕರಿಗೆ ಈ ಜಾಕ್ ಪಾಟ್ ಆಫರ್ ಕೊಡ್ತಾ ಇದೆ.
ಮೊದಲು ನಿಮ್ಮ ಸ್ಮಾರ್ಟ್ಫೋನ್ನಲ್ಲಿ Paytm ಅಪ್ಲಿಕೇಶನ್ ಓಪನ್ ಮಾಡಿ. ಮೇನ್ ಪೇಜ್ ನ ಎಡಭಾಗದಲ್ಲಿ ನಿಮ್ಮ ಫೋಟೋ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಸೈಡ್ ಮೆನುವಿನ ನಾಲ್ಕನೇ ಆಯ್ಕೆ ‘ಕ್ಯಾಶ್ಬ್ಯಾಕ್ ಮತ್ತು ಕೊಡುಗೆಗಳು’ ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ. ನೀವು ಈ ಆಯ್ಕೆಗೆ ಹೋದ ತಕ್ಷಣ, ‘Jackpot: Participate to Win’ ಎಂಬ ಅಂಕಣವನ್ನು ನೋಡುತ್ತೀರಿ, ಅದರಲ್ಲಿ ‘iPhone 13’ ಎಂಬ ಎರಡನೇ ಆಯ್ಕೆ ಇದೆ.
ಅದನ್ನು ಕ್ಲಿಕ್ ಮಾಡಿದ ತಕ್ಷಣ ಈ ಕೊಡುಗೆಯ ವಿವರಗಳು ಸಿಗುತ್ತವೆ. ಪೇಜ್ ನ ಕೆಳಭಾಗದಲ್ಲಿ ‘100 ಪಾಯಿಂಟ್ಗಳಿಗಾಗಿ ಈಗ ಭಾಗವಹಿಸಿ’ ಎಂಬ ಆಯ್ಕೆಯಿದೆ. ಈ ಆಫರ್ನಲ್ಲಿ ಪಾಲ್ಗೊಳ್ಳಲು ನೀವು 100 ಕ್ಯಾಶ್ಬ್ಯಾಕ್ ಪಾಯಿಂಟ್ಗಳನ್ನು ಬಳಸಬೇಕು. ಇದನ್ನು ಕ್ಲಿಕ್ ಮಾಡಿ. ಪೇಟಿಎಂ ಮೂಲಕ ಹಣ ಪಾವತಿ ಮಾಡಿದ್ರೆ ಈ ಕ್ಯಾಶ್ಬ್ಯಾಕ್ ಪಾಯಿಂಟ್ಗಳು ಸಿಗುತ್ತವೆ.
ಈ Paytm ಜಾಕ್ಪಾಟ್ ಆಫರ್ನಲ್ಲಿ ಕೆಲವು ನಿಯಮ ಮತ್ತು ಷರತ್ತುಗಳೂ ಇವೆ. Paytm ನಿಯಮದ ಪ್ರಕಾರ ಒಬ್ಬ ಬಳಕೆದಾರರಿಗೆ ಮಾತ್ರ iPhone 13 ನೀಡಲಾಗುತ್ತದೆ. ಇದನ್ನು ಪಡೆಯಲು ಯಾರು ಅರ್ಹರು ಎಂಬುದನ್ನೂ ಪೇಟಿಎಂ ನಿರ್ಧರಿಸುತ್ತದೆ. ನೀವು ಇದರಲ್ಲಿ ವಿಜೇತರಾದರೆ ನಿಮ್ಮನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ವಿಷಯ ತಿಳಿಸಲಾಗುತ್ತದೆ.
ಇದರಲ್ಲಿ ಭಾಗವಹಿಸಲು ಮಾರ್ಚ್ 20 ಕೊನೆಯ ದಿನ. ಮಾರ್ಚ್ 31ಕ್ಕೆ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ. ಇನ್ನು ಈ ಕೊಡುಗೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಬಳಕೆದಾರರು ‘Paytm First’ ಖರೀದಿಸಿದಾಗ 250 ರೂಪಾಯಿ ಕ್ಯಾಶ್ಬ್ಯಾಕ್ ಸಿಗುತ್ತದೆ.