
ಪುಟ್ಟ ಬಾಲಕಿಯೊಬ್ಬಳು ತನ್ನ ತಂದೆಗೆ ಲಿಪ್‌ಸ್ಟಿಕ್ ಹಾಕಿರುವ ವಿಡಿಯೋ ಇದೀಗ ನೆಟ್ಟಿಗರ ಮನ ಗೆದ್ದಿದೆ. ತಮಿಳುನಾಡಿನ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋದಲ್ಲಿ ವಿಜಯ್‌ಕುಮಾರ್ ಪುತ್ರಿ ಲಿಪ್‌ಸ್ಟಿಕ್ ಹಾಕುತ್ತಿರುವ ದೃಶ್ಯವಿದೆ. ತನ್ನ ತಂದೆಗೆ ಪುಟ್ಟ ಬಾಲೆ ಲಿಪ್‌ಸ್ಟಿಕ್ ಹಾಕಿದ್ದಾಳೆ. ಹೆಣ್ಣುಮಕ್ಕಳು / ಮಕ್ಕಳು ಜಗತ್ತಿನ ಎಲ್ಲಾ ಸಂತೋಷವನ್ನು ತರುತ್ತಾರೆ. ಮಗಳು ನೀಲಾ ತನ್ನೊಂದಿಗೆ ಎಂದು ಐಪಿಎಸ್ ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು 2.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅಪ್ಪ-ಮಗಳ ಸುಮಧುರ ಕ್ಷಣಗಳನ್ನು ವೀಕ್ಷಿಸಿದ ನೆಟ್ಟಿಗರು ಸಂತಸಗೊಂಡಿದ್ದಾರೆ.