
ಬಹು ನಿರೀಕ್ಷಿತ 16 ನೇ ಆವೃತ್ತಿ ಐಪಿಎಲ್ ಟೂರ್ನಿ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 31 ರಂದು ಐಪಿಎಲ್ 2023 ಟೂರ್ನಿ ಆರಂಭಗೊಳ್ಳುತ್ತಿದೆ. ಅಂದು ಸಂಜೆ 7.30ಕ್ಕೆ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಲಿದ್ದು, ಈ ಪಂದ್ಯ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಲಿದೆ.
ಬೆಂಗಳೂರು, ಮುಂಬೈ, ಚೆನ್ನೈ, ಮೊಹಾಲಿ ಸೇರಿದಂತೆ 12 ನಗರದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಆಯೋಜನೆಗೊಂಡಿದ್ದು, ಮೇ 28ರಂದು ಫೈನಲ್ ಪಂದ್ಯ ಕೂಡಾ ಅಹ್ಮದಾಬಾದ್ ನಲ್ಲಿಯೇ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೋರಾಟ ಏಪ್ರಿಲ್ 2 ರಂದು ಆರಂಭಗೊಳ್ಳಲಿದ್ದು, ಆರ್.ಸಿ.ಬಿ. ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಐಪಿಎಲ್ 2023 ಟೂರ್ನಿಯಲ್ಲಿ 70 ಲೀಗ್ ಪಂದ್ಯಗಳು ನಡೆಯಲಿದೆ. ಪಂದ್ಯಗಳು ಸಂಜೆ 7:30 ಕ್ಕೆ ಪ್ರಾರಂಭವಾಗಲಿದ್ದು, ಡಬಲ್ ಹೆಡರ್‌ಗಳ ದಿನದಂದು ಪಂದ್ಯಗಳು ಮಧ್ಯಾಹ್ನ 3:30 ರಿಂದ ಪ್ರಾರಂಭವಾಗುತ್ತದೆ.
ಪ್ರತಿ ತಂಡ 7 ಪಂದ್ಯವನ್ನು ತವರಿನಲ್ಲಿ ಹಾಗೂ 7 ಪಂದ್ಯಗಳನ್ನು ತವರಿನಾಚೆ ಆಡಲಿದೆ. ಮೇ 21ಕ್ಕೆ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಬಳಿಕ ಪ್ಲೇ ಆಫ್ ಹಂತದ ಪಂದ್ಯಗಳು ಆರಂಭಗೊಳ್ಳಲಿದೆ.
ಗ್ರೂಪ್ ಎ: ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಖನೌ ಸೂಪರ್ ಜೈಂಟ್ಸ್
ಗ್ರೂಪ್ ಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್
ಆರ್ಸಿಬಿ ವೇಳಾಪಟ್ಟಿ ಇಂತಿದೆ
ಪಂದ್ಯ 1: ಏಪ್ರಿಲ್ 2, 2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್, ಬೆಂಗಳೂರು
ಪಂದ್ಯ 2: ಏಪ್ರಿಲ್ 6, 2023 – ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತ್ತಾ
ಪಂದ್ಯ 3: ಏಪ್ರಿಲ್ 10,2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಖನೌ ಸೂಪರ್ ಜಯಂಟ್ಸ್, ಬೆಂಗಳೂರು
ಪಂದ್ಯ 4: ಏಪ್ರಿಲ್ 15, 2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್, ಬೆಂಗಳೂರು
ಪಂದ್ಯ 5: ಏಪ್ರಿಲ್ 17, 2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್, ಬೆಂಗಳೂರು
ಪಂದ್ಯ 6: ಏಪ್ರಿಲ್ 20, 2023 – ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೊಹಾಲಿ
ಪಂದ್ಯ 7: ಏಪ್ರಿಲ್ 23, 2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ್ ರಾಯಲ್ಸ್, ಬೆಂಗಳೂರು
ಪಂದ್ಯ 8: ಏಪ್ರಿಲ್ 26, 2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಕೋಲ್ಕತ್ತಾ ನೈಟ್ ರೈಡರ್ಸ್, ಬೆಂಗಳೂರು
ಪಂದ್ಯ 9: ಮೇ 1, 2023 – ಲಖನೌ ಸೂಪರ್ ಜಯಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಖನೌ
ಪಂದ್ಯ 10: ಮೇ 6, 2023 – ದೆಹಲಿ ಕ್ಯಾಪಿಟಲ್ಸ್ vsರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ
ಪಂದ್ಯ 11: ಮೇ 9, 2023 – ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ
ಪಂದ್ಯ 12: ಮೇ 14, 2023 – ರಾಜಸ್ಥಾನ ರಾಯಲ್ಸ್ vsರಾಯಲ್ ಚಾಲೆಂಜರ್ಸ್ ಬೆಂಗಳೂರು, ಜೈಪುರ
ಪಂದ್ಯ 13: ಮೇ 18, 2023 – ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೈದರಾಬಾದ್
ಪಂದ್ಯ 14: ಮೇ 21, 2023 – ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟನ್ಸ್, ಬೆಂಗಳೂರು
ಐಪಿಎಲ್ ಪಂದ್ಯಗಳ ಸಂಪೂರ್ಣ ಪಟ್ಟಿ ಇಂತಿದೆ
