ಐಪಿಎಲ್ ಎಂದಾಕ್ಷಣ ಕೇವಲ ಕ್ರಿಕೆಟ್ ಆಟಕ್ಕೆ ಮಾತ್ರ ಸೀಮಿತವಲ್ಲ. ಅನೇಕ ಕ್ರಿಕೆಟಿಗರು ಆಟದ ಹೊರತಾಗಿ ಬೇರೆ ಉದ್ಯೋಗವನ್ನೂ ಮಾಡುತ್ತಿದ್ದಾರೆ. ವೀಕ್ಷಕ ವಿವರಣೆ ಅಥವಾ ಕಾಮೆಂಟರಿ ಕೂಡ ಅವುಗಳಲ್ಲೊಂದು. ಇಂಡಿಯನ್ ಪ್ರೀಮಿಯರ್ ಲೀಗ್‌ನ 16 ನೇ ಆವೃತ್ತಿ ಈಗಾಗ್ಲೇ ಆರಂಭವಾಗಿದೆ. ಈ ಋತುವಿನಲ್ಲಿ 5 ಸಕ್ರಿಯ ಕ್ರಿಕೆಟಿಗರು ಕಾಮೆಂಟರಿ ಹೇಳ್ತಿದ್ದಾರೆ.
ಧವಲ್ ಕುಲಕರ್ಣಿ ಐಪಿಎಲ್ 2023 ಕ್ಕಾಗಿ ಜಿಯೋ ಸಿನಿಮಾದ ಕಾಮೆಂಟರಿ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರು ಮರಾಠಿ ಕಾಮೆಂಟರಿ ಪ್ಯಾನೆಲ್‌ನಲ್ಲಿದ್ದಾರೆ. ಈ ಹಿಂದೆ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಧವಲ್ ಕಾಮೆಂಟರಿ ಮಾಡಿದ್ದಾರೆ. ಧವಲ್ ಇನ್ನೂ ಸಕ್ರಿಯ ಕ್ರಿಕೆಟಿಗ, 92 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಅವರು MI ತಂಡದ ಭಾಗವಾಗಿದ್ದರು. ಐಪಿಎಲ್ 2017ರ ಫೈನಲ್‌ಗೆ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್, ಐಪಿಎಲ್ 2023 ರಲ್ಲಿ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ತಂಡದ ಭಾಗವಾಗಿ ಕಾಮೆಂಟರಿ ಮಾಡುತ್ತಿದ್ದಾರೆ.
ಕೇದಾರ್ ಜಾಧವ್ ಇನ್ನೂ ಸಕ್ರಿಯ ಕ್ರಿಕೆಟಿಗರಾಗಿದ್ದು, ಐಪಿಎಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. ಇದೀಗ ವಿಭಿನ್ನ ರೀತಿಯಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ಜಿಯೋ ಸಿನಿಮಾ ಅಪ್ಲಿಕೇಶನ್‌ಗಾಗಿ ಮರಾಠಿಯಲ್ಲಿ ಕಾಮೆಂಟರಿ ಮಾಡುತ್ತಿದ್ದಾರೆ. ಹನುಮ ವಿಹಾರಿ, ಭಾರತೀಯ ಟೆಸ್ಟ್ ಮ್ಯಾಚ್ ಸ್ಪೆಷಲಿಸ್ಟ್, ಐಪಿಎಲ್ 2023 ರ ವಿವರಣೆಗಾರರಲ್ಲಿ ಒಬ್ಬರು. ಜಿಯೋ ಸಿನಿಮಾ ಆಪ್‌ಗಾಗಿ ಅವರು ತೆಲುಗು ಕಾಮೆಂಟರಿ ಮಾಡುತ್ತಿದ್ದಾರೆ.
RCB ಮತ್ತು CSK ತಂಡದ ಮಾಜಿ ಆಟಗಾರ ಕೆಬಿ ಅರುಣ್ ಕಾರ್ತಿಕ್ ಪ್ರಸ್ತುತ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಪುದುಚೇರಿ ತಂಡದ ಪರ ಆಡುತ್ತಿದ್ದಾರೆ. ಅವರು ಐಪಿಎಲ್ 2023 ರಲ್ಲಿ ತಮಿಳು ನಿರೂಪಕರಾಗಿ ಕೆಲಸ ಮಾಡುತ್ತಿದ್ದಾರೆ.