ಡೆಹ್ರಿ: ಕಳ್ಳರು ಐತಿಹಾಸಿಕ ಸನ್-ವಾಚ್‌ನ ಪ್ರಮುಖ ಭಾಗಗಳನ್ನು ಕದ್ದಿರುವ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯ ಡೆಹ್ರಿಯಲ್ಲಿ ನಡೆದಿದೆ.
ಈ ಸನ್-ವಾಚ್ ಅನ್ನು 1871ರಲ್ಲಿ ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾಗಿರುವ ಡೆಹ್ರಿ ಪಟ್ಟಣದ ಪ್ರಮುಖ ಗುರುತು ಮತ್ತು ಹೆಮ್ಮೆಯಾಗಿದೆ. ಇದನ್ನು ಜಲಸಂಪನ್ಮೂಲ ಅಭಿವೃದ್ಧಿ ಇಲಾಖೆ ಕಚೇರಿಯ ಆವರಣದಲ್ಲಿ ಸ್ಥಾಪಿಸಲಾಗಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್, ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ), ಹೆಚ್ಚುವರಿ ಎಸ್‌ಪಿ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಸೇರಿದಂತೆ ಉನ್ನತ ಅಧಿಕಾರಿಗಳ ನಿವಾಸಗಳು ಮತ್ತು ಕಚೇರಿಗಳು ಇಲ್ಲಿರುವುದರಿಂದಾಗಿ ಈ ಸ್ಥಳವನ್ನು ಹೆಚ್ಚು ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗಿದೆ.
ವಾಚ್ ಇರುವ ಆವರಣದಲ್ಲಿ ಯಾವುದೇ ಭದ್ರತೆ ಇಲ್ಲದಿರುವುದರಿಂದ ಇದನ್ನು ಕಳ್ಳರು ದುರ್ಬಳಕೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪಾರಂಪರಿಕ ತಾಣವೆಂದು ಪರಿಗಣಿಸಲಾಗಿದ್ದರೂ ನಿರ್ವಹಣೆ ಕೊರತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳರು ಗಡಿಯಾರವನ್ನು ಒಡೆದು ಲೋಹದ (ಹಿತ್ತಾಳೆ) ಬ್ಲೇಡ್ ಅನ್ನು ಕದ್ದಿದ್ದಾರೆ. ಅಪರಿಚಿತ ಕಳ್ಳರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.