ಮುಂಬೈ: ಇಲ್ಲಿಯ ವಾಂಖೆಡೆ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ನ್ಯೂಜಿಲೆಂಡ್ ನ್ನು ಹಿಂದಿಕ್ಕಿ ನಂ. 1 ಸ್ಥಾನ ಅಲಂಕರಿಸಿದೆ. ಹೀಗಾಗಿ ಭಾರತೀಯ ಆಟಗಾರರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ನಿನ್ನೆಯಷ್ಟೇ ಒಂದೇ ಇನ್ನಿಂಗ್ಸ್ ನಲ್ಲಿ ಭಾರತದ 10 ವಿಕೆಟ್ ಕಬಳಿಸಿದ್ದ ಎಜಾಝ್ ಪಟೇಲ್ ರನ್ನು ಬೌಲರ್ ಆರ್. ಅಶ್ವಿನ್ ಸಂದರ್ಶನ ನಡೆಸಿ ವಿಶೇಷ ಗಿಫ್ಟ್ ನೀಡಿದ್ದರು. ಇದರ ಬೆನ್ನಲ್ಲಿಯೇ ಸದ್ಯ ಪಿಚ್ ತಯಾರಿಸಿದ್ದ ಗ್ರೌಂಡ್ಸ್ ಮೆನ್ ಗೆ ನಾಯಕ ವಿರಾಟ್ ಕೊಹ್ಲಿ ಉಡುಗೊರೆ ನೀಡಿದ್ದಾರೆ. ಮೊದಲ ಟೆಸ್ಟ್ ನಿರ್ಮಿಸಿದ್ದ ಗ್ರೌಂಡ್ಸ್ ಮೆನ್ ಗೆ ಕೋಚ್ ರಾಹುಲ್ ದ್ರಾವಿಡ್ ಗಿಫ್ಟ್ ನೀಡಿದ್ದರು.
ವಾಂಖೆಡೆ ಪಿಚ್ ಹೆಚ್ಚಾಗಿ ಸ್ಪಿನ್ನರ್ ಗಳಿಗೆ ಯೋಗ್ಯವಾಗಿರುತ್ತಿತ್ತು. ಆದರೆ, ಈ ಬಾರಿ ಇದು ವೇಗಿಗಳಿಗೂ ಸಹಕಾರ ನೀಡಿದೆ. ಹೀಗಾಗಿಯೇ ಇದರ ಲಾಭವನ್ನು ಸಂಪೂರ್ಣವಾಗಿ ಭಾರತ ತಂಡ ಉಪಯೋಗಿಸಿಕೊಂಡಿತು.
ಕಂಕಣಭಾಗ್ಯ ಕೂಡಿ ಬರಬೇಕೆಂದ್ರೆ ನಾಳೆ ಅವಶ್ಯಕವಾಗಿ ಮಾಡಿ ಈ ಕೆಲಸ
ಅಲ್ಲದೇ, ಪಂದ್ಯ ಆರಂಭವಾಗುವ ಹಿಂದಿನ ಎರಡು ದಿನ ಸತತ ಮಳೆ ಸುರಿದಿತ್ತು. ಆದರೂ ಪಿಚ್ ಮಾತ್ರ ಯಾವುದಕ್ಕೂ ಜಗ್ಗಿರಲಿಲ್ಲ. ಇದಕ್ಕೆ ಗ್ರೌಂಡ್ಸ್ ಮೆನ್ ಹೆಚ್ಚಿನ ಶ್ರಮವೇ ಕಾರಣವಾಗಿತ್ತು. ಹೀಗಾಗಿಯೇ ಇದನ್ನು ಗುರುತಿಸಿರುವ ಭಾರತೀಯ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಪಂದ್ಯ ಮುಗಿದ ನಂತರ ಗ್ರೌಂಡ್ಸ್ ಮೆನ್ ಗೆ 35 ಸಾವಿರ ರೂ. ಹಣ ನೀಡಿದ್ದಾರೆ.
ಇದಕ್ಕೂ ಮುನ್ನ ರಾಹುಲ್ ದ್ರಾವಿಡ್ ಮೊದಲ ಟೆಸ್ಟ್ ನ ಕಾನ್ಪುರ ಗ್ರೌಂಡ್ಸ್ ಮೆನ್ ಗೆ 35 ಸಾವಿರ ರೂ. ನೀಡಿದ್ದರು. ಇದನ್ನು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಪ್ರಕಟಿಸಿತ್ತು. ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಸರಣಿಯನ್ನು ಭಾರತವು 1-0 ಅಂತರದಿಂದ ಗೆದ್ದುಕೊಂಡಿದೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ, ಆತ್ಮವಿಶ್ವಾಸದಲ್ಲಿ ತೇಲುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಡಿ. 26ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.