ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ-ಬಿ) ಜುಲೈ 2022 ರಿಂದ, ಮಾಸ್ಟರ್ ಆಫ್ ಆರ್ಟ್ಸ್ ಬೈ ರಿಸರ್ಚ್ ಪ್ರೋಗ್ರಾಂ ಅನ್ನು ಹೊರತರುತ್ತಿದೆ.
ಪ್ರೀಮಿಯರ್ ಇನ್‌ಸ್ಟಿಟ್ಯೂಟ್‌ನ ಶಿಕ್ಷಣ ತಜ್ಞರ ಪ್ರಕಾರ, ಕೋರ್ಸ್ ಸಂಶೋಧನಾ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುತ್ತದೆ. ಎರಡು ವರ್ಷಗಳ ಕೋರ್ಸ್ ಇದಾಗಿದೆ. ವಿದ್ಯಾರ್ಥಿಗಳು ಮಾಹಿತಿಯ ವೈವಿಧ್ಯಮಯ ಮೂಲಗಳನ್ನು ಸಂಯೋಜಿಸಲು ಕಲಿಯುತ್ತಾರೆ. ಓದಲು, ಯೋಚಿಸಲು ಮತ್ತು ವಿಮರ್ಶಾತ್ಮಕವಾಗಿ ಬರೆಯಲು ಕಲಿಯುತ್ತಾರೆ ಎಂದು ಐಐಟಿ-ಬಿ ಹೇಳಿದೆ.
ಇತ್ತೀಚೆಗೆ ಪರಿಚಯಿಸಲಾದ ಜಿಎಟಿಇ-ಎಕ್ಸ್ಎಚ್ ಪೇಪರ್, ಪ್ರವೇಶ ಪರೀಕ್ಷೆ (ಎಂಎಎಟಿ) ಮತ್ತು ಸಂದರ್ಶನದ ಅಂಕಗಳನ್ನು ಆಧರಿಸಿ ಪ್ರವೇಶಗಳನ್ನು ಮಾಡಲಾಗುತ್ತದೆ. ಮಾನವ ವಿಜ್ಞಾನ, ಭಾಷಾಶಾಸ್ತ್ರ, ಸಾಹಿತ್ಯ ಮತ್ತು ಪ್ರದರ್ಶನ, ಸಮಾಜಶಾಸ್ತ್ರವನ್ನು ಕೋರ್ಸ್ ನಲ್ಲಿ ಸೇರಿಸಲಾಗಿದೆ.
ಐಐಟಿ ಬಾಂಬೆ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಲ್ಲಿ ಬಲವಾದ ವಿಶ್ಲೇಷಣಾತ್ಮಕ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುತ್ತದೆ ಎಂದು ಐಐಟಿ ಬಾಂಬೆಯ ನಿರ್ದೇಶಕ ಪ್ರೊ. ಸುಭಾಸಿಸ್ ಚೌಧರಿ ಹೇಳಿದ್ದಾರೆ.