ಇತ್ತೀಚಿಗೆ ಕೇಂದ್ರ ಸರ್ಕಾರ ಐಎಎಸ್ ಕೇಡರ್ ನಿಯಮಗಳಲ್ಲಿ ಕೆಲ ತಿದ್ದುಪಡಿಗಳನ್ನ ಪ್ರಸ್ತಾಪಿಸಿದೆ. ಕೇಂದ್ರದ ಪ್ರಸ್ತಾಪಕ್ಕೆ ಕೆಲ ರಾಜ್ಯ ಸರ್ಕಾರಗಳು ವಿರೋದ ವ್ಯಕ್ತಪಡಿಸಿದ್ದು, ಎರಡೇ ವಾರಗಳಲ್ಲಿ ಕೇಂದ್ರ ಸರ್ಕಾರ V/s ರಾಜ್ಯಸರ್ಕಾರ ಅನ್ನೊ ಚರ್ಚೆಯಾಗಿ ಮಾರ್ಪಟ್ಟಿದೆ. ತಿದ್ದುಪಡಿಯ ಪ್ರಸ್ತಾವನೆಯನ್ನು ವಿರೋಧಿಸಿರುವ ಹಲವು ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ.
IAS (ಕೇಡರ್) ನಿಯಮಗಳು 1954 ರ ನಿಯಮ 6 ರ ಪ್ರಸ್ತಾವಿತ ತಿದ್ದುಪಡಿಯ ಬಗ್ಗೆ ಅಭಿಪ್ರಾಯಗಳನ್ನು ಕೇಳಲು ಕೇಡರ್ ಜನವರಿ 12 ರಂದು, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (DoPT) ಎಲ್ಲಾ ರಾಜ್ಯಗಳಿಗೆ ಸೂಚನೆ ಕಳುಹಿಸಿದೆ.
ಐಎಎಸ್ ಕೇಡರ್ ನಿಯಮಗಳು 1954 ರಲ್ಲಿ ತಿದ್ದುಪಡಿಗಳೇನು?
ಐಎಎಸ್ ಕೇಡರ್ ನಿಯಮದಲ್ಲಿನ ತಿದ್ದುಪಡಿಗಳಿಂದ ಅಖಿಲ ಭಾರತ ಸೇವೆಗಳ (AIS) ಮೂರು ವಿಭಾಗದ ಹೆಚ್ಚಿನ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ಸಿಗುತ್ತದೆ. ಕೇಂದ್ರ ಸಚಿವಾಲಯಗಳಿಗೆ ಅಧಿಕಾರಿಗಳನ್ನ ನೇಮಿಸಲು ಕೆಂದ್ರಕ್ಕೆ ರಾಜ್ಯ ಸರ್ಕಾರಗಳ ಅನುಮೋದನೆಯ ಅಗತ್ಯವಿರುವುದಿಲ್ಲ.
ಐಎಎಸ್ ಕೇಡರ್ ನಿಯಮ ಬದಲಾವಣೆಗೆ ವಿರೋಧ
ಪ್ರಸ್ತಾವಿತ ತಿದ್ದುಪಡಿಗಳಿಂದ ಕೇಂದ್ರದ ಆಡಳಿತಾರೂಢ ಪಕ್ಷವನ್ನು ರಾಜಕೀಯವಾಗಿ ವಿರೋಧಿಸುವ, ರಾಜ್ಯ ಸರ್ಕಾರದ ನೀತಿಗಳನ್ನು ಅನುಷ್ಠಾನಗೊಳಿಸಲು ಎಐಎಸ್ ಅಧಿಕಾರಿಗಳಲ್ಲಿ ಭಯ ಮತ್ತು ಹಿಂಜರಿಕೆಯನ್ನು ಉಂಟುಮಾಡುಬಹುದು. ಇದರಿಂದ ಸಹಕಾರಿ ಫೆಡರಲಿಸಂ ದುರ್ಬಲವಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ.
ಅನೇಕ ರಾಜ್ಯ ಸರ್ಕಾರಗಳ ಬಳಿ ಹಿರಿಯ ಅಧಿಕಾರಿಗಳ ಕೊರತೆ ಇದೆ. ಕೇಂದ್ರ ಸರ್ಕಾರ ಅನುಸರಿಸಿದ ನೀತಿಗಳಿಂದ ಪ್ರಾಥಮಿಕವಾಗಿಯೆ ಐಎಎಸ್ ಕೇಡರ್ ನಿರ್ವಹಣೆಯಲ್ಲಿ ತಪ್ಪಾಗಿದೆ ಎಂದಿರು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಐಎಎಸ್ ನಿಯಮದ ತಿದ್ದುಪಡಿಯನ್ನು ವಿರೋಧಿಸಿದ್ದಾರೆ. ಇನ್ನುಳಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಘೇಲ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರು ಈ ಪ್ರಸ್ತಾವನೆಯನ್ನ ವಿರೋಧಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.